
ಪುತ್ತೂರು: ಶ್ರೀ ಚೌಕಾರು ಮಂತ್ರಾದಿ ಗುಳಿಗ ಶ್ರೀ ಸ್ವಾಮಿ ಕೊರಗ ತನಿಯಜ್ಜ ಸಾನಿಧ್ಯ ಮೂಲೆಕಾಡು ಪೋಳ್ಯ ಇಲ್ಲಿ 3 ನೇ ವರ್ಷದ ಶ್ರೀ ದೈವಗಳ ನೇಮೋತ್ಸವವು ಏ.05 ರಂದು ನಡೆಯಲಿದೆ.
ರಾತ್ರಿ 7.30 ಕ್ಕೆ ಭಂಡಾರ ತೆಗೆದು ಅನ್ನಸಂತರ್ಪಣೆ ಬಳಿಕ ಚೌಕಾರು ಮಂತ್ರಾದಿ ಗುಳಿಗ ದೈವದ ನೇಮೋತ್ಸವ ಬಳಿಕ ಸತ್ಯ ಸಾರ್ಲ ಪಟ್ಟದ ಕೊರಗ ತನಿಯಜ್ಜ ದೈವದ ನೇಮೋತ್ಸವ ನಡೆದು ಬಳಿಕ ಅಜ್ಜನ ಸಿರಿಗಂಧ ಪ್ರಸಾದ ವಿತರಣೆ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.