ಸ್ನೇಹ ಎನ್ನುವ ಎರಡಕ್ಷರವನ್ನು ವಿವರಿಸಲು ಅಸಾಧ್ಯ, ಇದು ಬೆಲೆಕಟ್ಟಲಾಗದ ಅನುಬಂಧ. ಕಷ್ಟ-ಸುಖ, ನಗು-ಅಳು ಹೀಗೆ ಪ್ರತಿಯೊಂದು ಕ್ಷಣದಲ್ಲೂ ಜೊತೆಯಾಗಿ ನಿಲ್ಲುವವನೆ ನಿಜವಾದ ಸ್ನೇಹಿತ. ಈ ಸುಂದರ ಸ್ನೇಹ ಸಂಬಂಧಕ್ಕೆ ಸಂಬಂಧಿಸಿದ ಹೃದಯಸ್ಪರ್ಶಿ ವಿಡಿಯೋಗಳು ಸೋಷಿಯಲ್ ಮೀಡಿಯಾ ದಲ್ಲಿ ಹರಿದಾಡುತ್ತಲೇ ಇರುತ್ತವೆ. ಅದಲ್ಲದೇ ಇಂತಹ ಸ್ನೇಹಿತರು ಇರ್ತಾರೆ ಎನ್ನುವ ಪ್ರಶ್ನೆಯೊಂದು ಕಾಡುವಂತೆ ಮಾಡುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಅಂತ್ಯಕ್ರಿಯೆ ವೇಳೆಯಲ್ಲಿ ಸತ್ತ ಹೆಣಕ್ಕೆ ಎಣ್ಣೆ ಕುಡಿಸಿ, ಸಿಗರೇಟ್ ಹೊತ್ತಿಸಿ ಬಾಯೊಳಗೆ ಇಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದರಲ್ಲಿ ವ್ಯಕ್ತಿ ಯ ಮೃತದೇಹವನ್ನು ಗುಂಡಿಯೊಳಗೆ ಮಲಗಿಸಿರುವುದನ್ನು ನೋಡಬಹುದು. ಅಲ್ಲೇ ಇದ್ದ ಒಬ್ಬ ಯುವಕನು ಎಣ್ಣೆ ಬಾಟಲಿ ಹಿಡಿದು ಲೋಟಕ್ಕೆ ಎಣ್ಣೆ ಸುರಿಯುತ್ತಿದ್ದಾನೆ. ಕೊನೆಗೆ ಮತ್ತೊಬ್ಬ ಈ ಎಣ್ಣೆಯನ್ನು ಸತ್ತ ವ್ಯಕ್ತಗೆ ಕುಡಿಸಿದ್ದಾನೆ. ತದನಂತರದಲ್ಲಿ ಸಿಗರೇಟ್ ಹೊತ್ತಿಸಿ ಹೆಣದ ಬಾಯಿಗೆ ಇಡುವುದನ್ನು ಗಮನಿಸಬಹುದು.