ಉಡುಪಿ : ಹುಡುಗಿ ಅಪಹರಣ ಪ್ರಕರಣದಲ್ಲಿ, ಹುಡುಗಿಯ ಪೋಷಕರು ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಿನ್ನೆ (ಏ.4) ನಡೆದಿದೆ.
ಈ ಪ್ರಕರಣದ ವಿಚಾರವಾಗಿ ಹುಡುಗಿ ಜೀನ ಮೆರಿಲ್ ಮತ್ತು ಅಕ್ರಮ್ ತಮ್ಮ ವಕೀಲರ ಮುಖೇನ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದಾಳೆ.
ಬಳಿಕ ಈ ಪ್ರಕರಣವು ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ಅದೇನು ಗೊತ್ತಾ ? ಇಲ್ಲಿದೆ ನೋಡಿ…
ವಿಚಾರಣೆಯ ವೇಳೆ ಆಕೆ ನ್ಯಾಯಾಧೀಶರ ಮುಂದೆ ‘ನನ್ನನ್ನು ಯಾರೂ ಕೂಡಾ ಅಪಹರಿಸಿರುವುದಿಲ್ಲ, ನಾನು ಸ್ವ- ಇಚ್ಛೆಯಿಂದ ಅಕ್ರಮ್ ಜೊತೆ ತೆರಳಿದ್ದೇನೆ’ ಎಂದು ತಿಳಿಸಿದ್ದಾಳೆ.
ಹುಡುಗಿಯ ತಾಯಿ ತನಗೆ ಮಗಳ ಜತೆ ಮಾತನಾಡ ಬೇಕು ಎಂದು ತಿಳಿಸಿದಾಗ, ನ್ಯಾಯಾಧೀಶರು ಸ್ವತ: ತಮ್ಮ ಕೊಠಡಿಯಲ್ಲಿ ಹುಡುಗಿ ಮಾತನಾಡಿಸಿರುತ್ತಾರೆ.
ಬಳಿಕ ವಿಚಾರಣೆಯ ವೇಳೆ ತಾಯಿ ತನ್ನ ಪುತ್ರಿಯನ್ನು ತನ್ನ ಜತೆ ಕಳುಹಿಸಿ ಕೊಡುವಂತೆ ನ್ಯಾಯಾಧೀಶರಲ್ಲಿ ಕೇಳಿಕೊಂಡಿದ್ದು, ಅದಕ್ಕೆ ಹುಡುಗಿ ಒಪ್ಪಿರುವುದಿಲ್ಲ.
ತಾನು ಅಕ್ರಮ್ ಜತೆ ಎಪ್ರಿಲ್ 19 ರಂದು ರಿಜಿಸ್ಟರ್ ಮದುವೆ ಮಾಡಿಕೊಳ್ಳುತ್ತಿದ್ದು, ಮದುವೆ ಬಳಿಕ ತಾಯಿಯನ್ನು ಭೇಟಿಯಾಗುವುದಾಗಿ ತಿಳಿಸಿದ್ದಾಳೆ. ಅಲ್ಲದೆ ತಾಯಿಯೊಂದಿಗೆ ತಾನು ಉತ್ತಮ ಬಾಂಧವ್ಯದಿಂದ ಇರುವುದಾಗಿ ತಿಳಿಸಿದ್ದಾಳೆ. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಎಪ್ರಿಲ್ 22 ಕ್ಕೆ ನಿಗದಿಪಡಿಸಿದ್ದು, ಅಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನಿರ್ದೇಶಿಸಿದೆ.