ಬೆಂಗಳೂರಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ವಾ? BTM ಲೇಔಟ್ ಸುದ್ದಗುಂಟೆ ಪಾಳ್ಯದಲ್ಲಿ ನಡೆದಿರೋ ಘಟನೆಯಿಂದ ಈ ಅನುಮಾನ ಮೂಡುವಂತೆ ಮಾಡಿದೆ.
ಕಳೆದ ಏಪ್ರಿಲ್ 3ರಂದು ಈ ಘಟನೆ ನಡೆದಿದೆ. ರಾತ್ರಿ ಒಂದು ಗಂಟೆ ಸಮಯದಲ್ಲಿ ಇಬ್ಬರು ಹುಡುಗಿಯರು ಜೋರಾಗಿ ಕಿರುಚಾಡಿದ್ದಾರೆ. ಈ ಶಬ್ಧ ಕೇಳಿದ ಜನ ಮನೆಯಿಂದ ಆಚೆ ಬಂದಿದ್ದಾರೆ. ಆದ್ರೆ ಆಗ ಅವ್ರಿಗೆ ಅಲ್ಲೇನು ಕಂಡಿಲ್ಲ. ಆ ಶಬ್ಧ ಮಾಡಿದ್ದು ಯಾರು ಅನ್ನೋದು ಗೊತ್ತಾಗಿಲ್ಲ. ಕೊನೆಗೆ ಅಲ್ಲೇ ಇದ್ದ ಸಿಸಿಟಿವಿಯನ್ನು ಚೆಕ್ ಮಾಡಿದಾಗ ಈ ವಿಕೃತ ಕಾಮುಕನ ನೀಚ ಕೃತ್ಯ ಬೆಳಕಿಗೆ ಬಂದಿದೆ.
ಅಂದು ರಾತ್ರಿ ವೇಳೆ ಯುವತಿಯರಿಬ್ಬರು ನಡೆದುಕೊಂಡು ಹೋಗುತ್ತಾ ಇರ್ತಾರೆ. ಅವರ ಹಿಂದೆ ಒಬ್ಬ ಕಾಮುಕ ಪಿಶಾಚಿ ನಡೆದುಕೊಂಡು ಬರುತ್ತಾನೆ. ಯುವತಿಯರ ಹಿಂದೆ ಓಡೋಡಿ ಬಂದವನೇ ಓರ್ವ ಯುವತಿಯನ್ನು ತಬ್ಬಿಕೊಂಡಿದ್ದಾನೆ. ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ಎಸ್ಕೇಪ್ ಆಗಿದ್ದಾನೆ.
ಸದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯ 400 ಮೀಟರ್ ಅಂತರದಲ್ಲೇ ಈ ಘಟನೆ ನಡೆದಿದೆ. ಯುವಕನ ಈ ಅಸಭ್ಯ ವರ್ತನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಜಾಗದಲ್ಲಿ ಸಿಸಿಟಿವಿ ಇದ್ದಿದ್ದಕ್ಕೆ ಈ ಕೃತ್ಯ ಬಯಲಾಗಿದೆ.
ದುಷ್ಕರ್ಮಿ ವಿರುದ್ಧ ಸೂಕ್ತ ತನಿಖೆ ಮಾಡಿ ಕಠಿಣ ಶಿಕ್ಷೆ ಆಗ್ಬೇಕು ಅಂತ ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಸಿಸಿಟಿವಿ ದೃಶ್ಯ ಬಯಲಾಗುತ್ತಿದ್ದಂತೆ ಸದ್ದುಗುಂಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.. ಕಾಮುಕನಿಗಾಗಿ ಸದ್ದುಗುಂಟೆಯ ಪೊಲೀಸರು ಬಲೆ ಬೀಸಿದ್ದಾರೆ.