ಬೆಳ್ತಂಗಡಿ : ಪೊಲೀಸ್ ಭದ್ರತೆ ನಡೆವೆಯೇ ಯುವಕನೋರ್ವ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟರು ಕೊಲೆ ಪ್ರಕರಣದ ಆರೋಪಿಗೆ ಮುತ್ತಿಕ್ಕಿರುವ ಘಟನೆ ನಡೆದಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಶಾಫಿ ಬೆಳ್ಳಾರೆಯನ್ನು ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆದುಕೊಂಡು ಬಂದಿದ್ದರು.
ಆ ವೇಳೆ ಕೋರ್ಟ್ ಆವರಣದಲ್ಲಿ ಪೊಲೀಸರ ಭದ್ರತೆ ನಡುವೆ ಯುವಕನೋರ್ವ ಬಂದು ಆರೋಪಿ ಶಾಫಿ ಬೆಳ್ಳಾರೆ ಹಣೆಗೆ ಮುತ್ತು ಕೊಟ್ಟಿದ್ದಾನೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಆರೋಪಿ ಶಾಫಿ ಬೆಳ್ಳಾರೆ ಈಗಾಗಲೇ ಎನ್ಐಎಯಿಂದ ಬಂಧನವಾಗಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆದ್ರೆ, 2017ರಲ್ಲಿ ಆರ್.ಎಸ್.ಎಸ್ ಹಾಗೂ ಕಲ್ಲಡ್ಕ ಭಟ್ ವಿರುದ್ಧ ಅವಹೇನಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಟಿ ವಾರೆಂಟ್ ಮೇಲೆ ಪೊಲೀಸರು ಶಾಫಿ ಬೆಳ್ಳಾರೆಯನ್ನ ಕರೆದುಕೊಂಡು ಬಂದು ಬೆಳ್ತಂಗಡಿ ಕೋರ್ಟ್ಗೆ ಹಾಜರುಪಡಿಸಿದರು.
ಈ ವೇಳೆ ಈ ಮುತ್ತು ಕೊಟ್ಟಿರುವ ಘಟನೆ ನಡೆದಿದೆ.