ನ್ಯೂಸ್

ನಾವು ನಿಮ್ಮ ಪರ ಬಹಿರಂಗ ಪ್ರಚಾರಕ್ಕೆ ಸಜ್ಜಾಗಿದ್ದೇವೆ : ಪೆರುವಾಯಿಯ ಬಿಜೆಪಿ ಕಾರ್ಯಕರ್ತರಿಂದ ಶಾಸಕ ಅಶೋಕ್ ರೈ ಗೆ ಭರವಸೆ..!!

ಪುತ್ತೂರು: ನಾವು ಹಲವು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದೇವೆ ಆದರೆ ನಮ್ಮ ರಸ್ತೆಯನ್ನು ಇದುವರೆಗೂ ಯಾರೂ ಅಭಿವೃದ್ದಿ ಮಾಡಿಲ್ಲ, ನೀವು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸ ಮಾಡುತ್ತಿದ್ದೀರಿ, ಪಕ್ಷ ಬೇಧವಿಲ್ಲದೆ ಅನುದಾನವನ್ನು ನೀಡುತ್ತಿದ್ದೀರಿ, ನಮ್ಮ ಬೇಡಿಕೆಯನ್ನು ಈಡೇರಿಸಿದ್ದಲ್ಲಿ ನಾವು ನಿಮ್ಮ ಪರ ಬಹಿರಂಗ ಪ್ರಚಾರ ಮಾಡಿಯೇ ಮಾಡುತ್ತೇವೆ ಎಂದು ಪೆರುವಾಯಿ ಗ್ರಾಮದ ಬಿಜೆಪಿ ಕಾರ್ಯಕರ್ತರ ನಿಯೋಗವಚೊಂದು ಪುತ್ತೂರು ಶಾಸಕ ಅಶೋಕ್ ರೈ ನಿವಾಸಕ್ಕೆ ಬಂದು ಭರವಸೆಯ ಜೊತೆಗೆ ಶಪಥ ಮಾಡಿದ್ದಾರೆ. ಪೆರುವಾಯಿ ಗ್ರಾಮದ ಬದಿಮಾರ್ ಪ್ರದೇಶದಲ್ಲಿ ಅನೇಕ ಮನೆಗಳಿದೆ. ನಮ್ಮ ರಸ್ತೆ ಇನ್ನೂ ಅಭಿವೃದ್ದಿಯಾಗಿಲ್ಲ. ರಸ್ತೆಯಾಗಬೇಕಾದರೆ ಖಾಸಗಿ ವ್ಯಕ್ತಿಗಳು ಜಾಗ ಬಿಟ್ಟುಕೊಡಬೇಕಾಗುತ್ತದೆ. ಇಷ್ಟು ವರ್ಷದಲ್ಲಿ ನಾವು ಮಾಡಿದ ಪ್ರಯತ್ನವೆಲ್ಲವೂ ವಿಫಲವಾಗಿದೆ. ರಾಜಕೀಯ ನೇತಾರರು ಈ ಹಿಂದೆ ಭರವಸೆಯನ್ನು ಮಾತ್ರ ಕೊಟ್ಟಿದ್ದಾರೆ ವಿನಾ ನಮ್ಮ ಸಮಸ್ಯೆ ಪರಿಹಾರ ಮಾಡಿಲ್ಲ. ಖಾಸಗಿ ವ್ಯಕ್ತಿಗಳ ಜೊತೆ ಮಾತುಕತೆ ನಡೆಸಿ ನಮ್ಮ ಪ್ರದೇಶಕ್ಕೆ ರಸ್ತೆಯನ್ನು ನಿರ್ಮಾಣ ಮಾಡಿ ಕೊಡುತ್ತೀರಿ ಎಂಬ ಪೂರ್ಣ ನಂಬಿಕೆ ನಮ್ಮಲ್ಲಿದೆ. ನಮ್ಮ ಬೇಡಿಕೆಯನ್ನು ನೀವು ಈಡೇರಿದ್ದಲ್ಲಿ ನಾವು ಬಹಿರಂಗವಾಗಿ ನಿಮ್ಮ ಪರ ಪ್ರಚಾರ ಮಾಡುತ್ತೇವೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಶಾಸಕರ ಮುಂದೆ ಶಪಥ ಮಾಡಿದ್ದಾರೆ. ಈ ವೇಳೆ ವಸಂತಶೆಟ್ಟಿ ಬದಿಯಾರು, ಜಯರಾಮ ಬಿ, ಪದ್ಮಶ್ರೀ, ಜಯರಾಮ ವಿಠಲ, ಮತ್ತು ಗೀತಾ ಉಪಸ್ಥಿತರಿದ್ದರು. ನಮ್ಮ ಜೊತೆ ಇನ್ನೂ ಅನೇಕ ಮಂದಿ ಇದ್ದು ಅವರೆಲ್ಲರನ್ನೂ ನಾವು ಸೇರಿಸಿಕೊಳ್ಳಲಿದ್ದೇವೆ ಎಂದು ಹೇಳಿದರು. ಈ ವೇಳೆ ಮಾತನಾಡಿದ ಶಾಸಕರು ಖಾಸಗಿ ವ್ಯಕ್ತಿಗಳ ಜೊತೆ ಮಾತುಕತೆ ನಡೆಸುವ ಪ್ರಯತ್ನವನ್ನು ಮಾಡುತ್ತೇನೆ. ಅವರ ಮನವೊಲಿಸಿ ರಸ್ತೆ ನಿರ್ಮಾಣದ ಭರವಸೆಯನ್ನು ನೀಡಿದರು.

Read more

ಬಿಹಾರದಿಂದ ರೈಲಿನಲ್ಲಿ ಗಾಂಜಾ ಸಾಗಾಟ: ಬಜಪೆ ಪೊಲೀಸರು ಇಬ್ಬರು ಅಂತಾರಾಜ್ಯ ಆರೋಪಿತರ ಬಂಧನ..!!

ಮಂಗಳೂರು: ಬಿಹಾರ ರಾಜ್ಯದಿಂದ ರೈಲು ಮೂಲಕ ಮಂಗಳೂರಿಗೆ ಮಾದಕ ವಸ್ತು ಗಾಂಜಾವನ್ನು ತರಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಅಂತಾರಾಜ್ಯ ಆರೋಪಿತರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ದಿನಾಂಕ...

Read more

ಬೆಳ್ತಂಗಡಿ : ಮದ್ದಡ್ಕದಲ್ಲಿ ಎಂಡಿಎಂಎ ಸಹಿತ ಆರೋಪಿಯ ಬಂಧನ : ರೂ.5.54 ಲಕ್ಷ ಮೌಲ್ಯದ ಮಾದಕ ವಸ್ತು, ಕಾರು ವಶ..!!

ಬೆಳ್ತಂಗಡಿ: ಬೆಳ್ತಂಗಡಿ ಪೊಲೀಸ್ ಠಾಣೆಯ ಪಿ.ಎಸ್.ಐ ಆನಂದ ಎಂ. ರವರು ಸಿಬ್ಬಂದಿಗಳೊಂದಿಗೆ ದಿನಾಂಕ 03-01-2026 ರಂದು ಸಂಜೆ 4.00 ಗಂಟೆಯಿಂದ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಬೆಳ್ತಂಗಡಿ ತಾಲೂಕು...

Read more

ಪ್ರೀತಿಸಿದ ಹುಡುಗನ ವಶೀಕರಣ ಮಾಡುವುದಾಗಿ ನಂಬಿಸಿ ಯುವತಿಗೆ ಲಕ್ಷ ಲಕ್ಷ ವಂಚನೆ..!!

ಆನ್ಲೈನ್ ನಲ್ಲಿ ವಶೀಕರಣ ಆ್ಯಡ್ ನಂಬಿ ಯುವತಿಯೊಬ್ಬಳು ಲಕ್ಷ ಲಕ್ಷ ಹಣ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರೀತಿಸಿದ ಹುಡುಗನನ್ನು ವಶೀಕರಣ ಮಾಡಿಸುವಂತೆ ಕೇಳಿದಾಕೆಯಿಂದ 2 ಲಕ್ಷಕ್ಕೂ ಹೆಚ್ಚು ಹಣ...

Read more

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಗೂ ಬೆದರಿಕೆ ಕಾಮೆಂಟ್: ಪ್ರಕರಣ ದಾಖಲು..!!

ಮಂಗಳೂರು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಮುದಾಯಗಳ ನಡುವೆ ವೈಷಮ್ಯ ಉಂಟುಮಾಡುವ ಉದ್ದೇಶದಿಂದ ಪ್ರಚೋದನಕಾರಿ ಪೋಸ್ಟ್ ಹಾಗೂ ಕೊಲೆ ಬೆದರಿಕೆ...

Read more

ಬೆಳ್ಳಾರೆ: ಕೆರೆಗೆ ಹಾರಿ ತಾಯಿ ಮಗು ಮೃತ್ಯು…!!!

ಬೆಳ್ಳಾರೆ: ಕೊಡಿಯಾಲದ ಆರ್ವಾರದಲ್ಲಿ ತಾಯಿ ಮಗು ಕೆರೆಗೆ ಹಾರಿ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಹರೀಶ್ ಆರ್ವಾರ ಎಂಬವರ ಪತ್ನಿ ಮಧುಶ್ರೀ ಹಾಗೂ 2 ವರ್ಷದ...

Read more

ನಿಧಿ ಆಸೆಗೆ ಪೋಷಕರಿಂದಲೇ ಮಗು ಬಲಿಗೆ ಯತ್ನ? 8 ತಿಂಗಳ ಕಂದಮ್ಮನ ರಕ್ಷಣೆ..!!

ನಿಧಿ ಆಸೆಗಾಗಿ ನಡೆಸಿದ ಪೂಜೆಗಾಗಿ ಪೋಷಕರು ಮಗುವನ್ನೇ ಬಲಿ ಕೊಡಲು ಹೋಗಿರುವ ಘಟನೆ ನಡೆದ ಆರೋಪ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಜನತಾ ಕಾಲೋನಿಯಲ್ಲಿ ಕೇಳಿಬಂದಿದೆ....

Read more

(ಜ.10/11) ಮುಕ್ಕೂರು ನೇಸರ ಯುವಕ ಮಂಡಲದ ದಶ ಪ್ರಣತಿ ಕಾರ್ಯಕ್ರಮ ಹಾಗೂ ಶಾಶ್ವತ ಯೋಜನೆಗಳ ಲೋಕಾರ್ಪಣೆ..!!

ಜ.11 ರಂದು ಸಂಜೆ 6 ರಿಂದ ಶಿವದೂತೆ ಗುಳಿಗೆ ನಾಟಕ ಪ್ರದರ್ಶನ ಸುಳ್ಯ, ಜ.2 : ಪೆರುವಾಜೆ ಗ್ರಾಮದ ಮುಕ್ಕೂರು ನೇಸರ ಯುವಕ ಮಂಡಲದ 10ನೇ ವರ್ಷದ...

Read more

ಟೈ‌ರ್ ಸ್ಪೋಟಗೊಂಡು ಕಾರು ಪಲ್ಟಿ..!!!

ಮಂಗಳೂರು: ನಗರದ ಹೊರ ವಲಯ ಮರಕಡದಲ್ಲಿ ಕಾರಿನ ಟೈ‌ರ್ ಸ್ಫೋಟಗೊಂಡು ಸಂಭವಿಸಿದ ಅಪಘಾತವೊಂದರಲ್ಲಿ ಕಾರು ಚಲಾಯಿಸುತ್ತಿದ್ದ ಬೊಂದೇಲ್ ಸಂತ ಲಾರೆನ್ಸರ ಪುಣ್ಯಕ್ಷೇತ್ರದ ಧರ್ಮಗುರು ಫಾ| ಆ್ಯಂಡೋ ಲಿಯೋ...

Read more

ಮತದಾರ ಪಟ್ಟಿ ಮ್ಯಾಪಿಂಗ್ ಪ್ರಕ್ರಿಯೆ ಸ್ಥಗಿತಗೊಳಿಸಿ: ಸಹಾಯಕ ಕಮಿಷನರ್‌ಗೆ ಶಾಸಕ ಅಶೋಕ್ ರೈ ಸೂಚನೆ..!!

ಪುತ್ತೂರು: ಕರ್ನಾಟಕದಲ್ಲಿ ಎಸ್‌ಐಆರ್ ಗೆ ಇನ್ನೂ ಅಧಿಕೃತ ಆದೇಶವಾಗಿಲ್ಲ ಆದರೂ ಕೆಲವು ಕಡೆಗಳಲ್ಲಿ ಬಿಎಲ್‌ಒಗಳಿಗೆ ಮತದಾರ ಪಟ್ಟಿ ಪರಿಷ್ಕರಣೆ ( ಮ್ಯಾಪಿಂಗ್) ನಡೆಸು ಆದೇಶ ನೀಡಿದ್ದೀರಿ, ಯಾವ...

Read more
Page 40 of 1625 1 39 40 41 1,625

Recent News

You cannot copy content of this page