ಆಲಂಕಾರು: ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರಿ ಶಾಲೆಯೊಂದನ್ನು ದುರುಪಯೋಗ ಪಡಿಸಿಕೊಂಡ ಕಿಡಿಗೇಡಿಗಳು ಶಾಲಾ ವರಾಂಡದಲ್ಲಿ ಬಾಡೂಟ ತಯಾರಿಸಿ ಎಂಜಾಯ್ ಮಾಡಿದ ಘಟನೆ ನಡೆದಿದೆ.
ಜೂ.16 ರಂದು ರಾತ್ರಿ ನಡೆದಿರುವುದಾಗಿ ಶಾಲಾ ಪರಿಸರದ ಜನರು ಮಾಹಿತಿ ನೀಡಿದ್ದಾರೆ. ಕೊಯಿಲ ಸರ್ಕಾರಿ ಶಾಲೆಗೆ ಕಾರು ಹಾಗೂ ಬೈಕ್ ನಲ್ಲಿ ಬಂದ ಸುಮಾರು 10 ಕ್ಕೂ ಹೆಚ್ಚು ಕಿಡಿಗೇಡುಗಳು ಶಾಲಾ ಜಗಲಿ ,ಅವರಣದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದರು ಎನ್ನಲಾಗಿದೆ. ಮಾಂಸದೂಟ ತಯಾರಿಸಿದ ಕುರುಹು ಶಾಲಾ ಜಗಲಿಯಲ್ಲಿ ಕಂಡುಬಂದಿದಲ್ಲದೆ ಬೀಡಿ ಸಿಗರೇಟಿನ ತುಂಡುಗಳು ಕಾಣ ಸಿಕ್ಕಿವೆ.
ಶಾಲಾ ಸುತ್ತಮುತ್ತಲಿನ ಸ್ಥಳಿಯ ನಿವಾಸಿಗಳು ರಾತ್ರಿ ಗಾಳಿ ಮಳೆಯಿಂದಾಗಿ ವಿದ್ಯುತ್ ವತ್ಯಯ ಉಂಟಾದ ಹಿನ್ನಲೆಯಲ್ಲಿ ಪರಿಶೀಲಿಸುವ ಸಲುವಾಗಿ ಶಾಲೆ ಪರಿಸರಕ್ಕೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಶಾಲಾ ಅವರಣದಲ್ಲಿ ನಿಲುಗಡೆಯಾದ ವಾಹನಗಳು ಸ್ಥಳೀಯರನ್ನು ಕಂಡೊಡನೆ ಪಲಾಯನವಾಗಿದೆ. ಸ್ಥಳೀಯರು ಈ ಬಗ್ಗೆ ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.