ಪುತ್ತೂರು: ಮೂರು ತಿಂಗಳ ಹಿಂದೆ ಪುತ್ತೂರಿನ ಚಿನ್ನಾಭರಣ ಮಳಿಗೆಯಿಂದ ಕಳವಾದ ಪ್ರಕರಣದಲ್ಲಿ ಬಂಧಿತ ಆರೋಪಿಗಳಿಂದ ಕಳವು ಸೊತ್ತುಗಳನ್ನು ವಶ ಪಡಿಸುವ ಕಾರ್ಯಾಚರಣೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಪುತ್ತೂರು ಸಂಚಾರ ಪೋಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಸ್ಮರಿಯ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ.
ಪ್ರಶಂಸನಾ ಪತ್ರದೊಂದಿಗೆ ರೂ. 1ಸಾವಿರ ನಗದು ನೀಡಲಾಗಿದ್ದು, ಪುತ್ತೂರ ಡಿವೈಎಸ್ಪಿ ಡಾ. ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ಅವರು ಪ್ರಶಾಂಸನಾ ಪತ್ರವನ್ನು ಸ್ಮರೀಯ ಅವರಿಗೆ ಹಸ್ತಾಂತರಿಸಿದರು. ಸುಳ್ಯದಲ್ಲಿ ಚಿನ್ನಾಭರಣ ಕಳವು ವಿಚಾರದಲ್ಲಿ ಬಂಧಿತರಾಗಿದ್ದ ಆರೋಪಿಗಳ ವಿಚಾರಣೆ ವೇಳೆ ಪುತ್ತೂರಿನಲ್ಲೂ ಕಳವು ಮಾಡಿದ ವಿಚಾರ ಬೆಳಕಿಗೆ ಬಂದಿತ್ತು. ಇದೇ ವೇಳೆ ಸುಳ್ಯ ಪೊಲೀಸರ ಜೊತೆ ಕೇರಳ, ಮಲಪುರಂ, ಈಜಿಕೊಡು ಪರಿಸರದಲ್ಲಿನ ಪೊಲೀಸರನ್ನು ಸಂಪರ್ಕಿಸಿ ಸ್ವಾಧೀನದ ವೇಳೆ ಅಲ್ಲಿನ ನಾಗರೀಕರನ್ನು ನಿಭಾಯಿಸಿಕೊಂಡು ಸುಳ್ಯ ಮತ್ತು ಪುತ್ತೂರಿನ ಚಿನ್ನಾಭರಣ ಮಳಿಗೆಯಿಂದ ಕಳವು ಸೊತ್ತು ಸ್ವಾಧೀನ ಪಡಿಸುವಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಣೆ ಮತ್ತು ಪ್ರಾಮಾಣಿಕತೆಯನ್ನು ಗುರುತಿಸಿ ಅವರಿಗೆ ಈ ಪ್ರಶಂಸನಾ ಪತ್ರ ನೀಡಲಾಗಿದೆ.