ವಿಟ್ಲ : ಭಾರೀ ಗಾಳಿ ಮಳೆಗೆ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಘಟನೆ ವಿಟ್ಲ-ಕಾಸರಗೋಡು ರಸ್ತೆಯ ಭಗವತಿ ದೇವಸ್ಥಾನದ ಮುಂಭಾಗ ನಡೆದಿದೆ.
ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ. ಆದರೇ ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಹಿನ್ನಲೆ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಕಾಸರಗೋಡು ಕಡೆ ತೆರಳುವ ಹಾಗೂ ಆ ಕಡೆಯಿಂದ ಬರುವ ವಾಹನಗಳು ರಸ್ತೆಯಲ್ಲಿಯೇ ನಿಂತಿದ್ದು, ವಾಹನ ಸಂಚಾರ ಸ್ಥಗಿತವಾಗಿದೆ.