ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರ ಕಚೇರಿ ಬಳಿ ಮೇ 11ರಂದು ರಾತ್ರಿ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ವ್ಯಕ್ತಿಯನ್ನು ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ ಮತ್ತು ವಿಚಾರಣೆ ವೇಳೆ ಆತ ನೆಟ್ಟಣಿಗೆ ಮುಡ್ನೂರಿನ ವ್ಯಕ್ತಿಯಾಗಿರುವುದಾಗಿ ಬೆಳಕಿಗೆ ಬಂದಿದೆ.
ನೆಟ್ಟಣಿಗೆ ಮೂಡ್ನೂರಿನ ವ್ಯಕ್ತಿಯೊಬ್ಬರು ರಾತ್ರಿ ಬಸ್ ಸಿಗಲಿಲ್ಲ ಎಂದು ಬಸ್ ನಿಲ್ದಾಣದಲ್ಲಿದ್ದರು. ನಾನು ರಾತ್ರಿ ಅಲ್ಲಿ ಮಲಗಲು ಯತ್ನಿಸಿದಾಗ ಅಲ್ಲಿ ಬಿಡಲಿಲ್ಲ. ಹಾಗಾಗಿ ಮಲಗಲು ಶಾಸಕರ ಕಚೇರಿಗೆ ಬಂದಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆಂದು ಪೊಲೀಸ್ ಮಾಹಿತಿಯಿಂದ ಲಭ್ಯವಾಗಿದೆ.



























