ಕಿನ್ನಿಗೋಳಿ: ಮದ್ದಡ್ಕ–ಕಿನ್ನಿಗೋಳಿಯಿಂದ ಪಡಂಗಡಿ ಸಂಪರ್ಕ ರಸ್ತೆಯ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ದೇರಮಾರ್‌ನಲ್ಲಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯೊಂದು ಮಣ್ಣಿನ ರಸ್ತೆಯಲ್ಲಿ ಜಾರಿ ಪಲ್ಟಿಯಾದ ಘಟನೆ ಗುರುವಾರ (ಜೂನ್ 26) ನಡೆದಿದೆ.
ಅಪಘಾತದ ವೇಳೆ ಚಾಲಕರು ಅಪಾಯದಿಂದ ಪಾರಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಟಿಪ್ಪರ್ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನಕ್ಕೆ ಭಾರೀ ಹಾನಿಯಾಗಿದೆ.
ಮಣ್ಣಿನ ರಸ್ತೆಯ ಜಾರುವಿಕೆ ಹಾಗೂ ಮಳೆಯಿಂದ ರಸ್ತೆ ದುರ್ಬಲಗೊಂಡಿರುವುದು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.



























