ಬೆಟ್ಟಂಪಾಡಿ ಸರಳೀಕಾನ ನಿವಾಸಿ ಸಶಿತ್ ಎಸ್ ಅವರು ದಿನಾಂಕ 13-05-2026ರಂದು ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಬೈಕ್ ಮತ್ತು ಟಾಟಾ ಏಸ್ ವಾಹನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಸಶಿತ್ ಅವರ ಬಲ ಕಾಲಿನ ಎಲುಬು, ಸೊಂಟದ ಪಕ್ಕೆಲುಬು, ಎಡಕೈ ಎಲುಬು, ಬಲಗೈಯ ಎರಡು ಬೆರಳುಗಳು ಹಾಗೂ ಕುತ್ತಿಗೆಯ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಪ್ರಸ್ತುತ ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈದ್ಯರ ಪ್ರಕಾರ ಶಸ್ತ್ರಚಿಕಿತ್ಸೆ ಹಾಗೂ ಮುಂದಿನ ಚಿಕಿತ್ಸೆಗೆ ಸುಮಾರು ₹6 ರಿಂದ ₹7 ಲಕ್ಷ ವೆಚ್ಚವಾಗುವ ಸಾಧ್ಯತೆ ಇದೆ. ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಇಷ್ಟು ದೊಡ್ಡ ಮೊತ್ತವನ್ನು ಭರಿಸುವುದು ಕಷ್ಟಕರವಾಗಿದ್ದು, ಸಹೃದಯರು ತಮ್ಮಿಂದಾದ ನೆರವು ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ನೆರವಿಗಾಗಿ ಬ್ಯಾಂಕ್ ವಿವರಗಳು:
ಹೆಸರು: Sowmya Shree S
ಖಾತೆ ಸಂಖ್ಯೆ: 64182038892
IFSC Code: SBIN0004270
ಸಹಾಯ ಮಾಡಲು ಇಚ್ಛಿಸುವವರು ಮೇಲ್ಕಂಡ ಖಾತೆಗೆ ತಮ್ಮ ನೆರವನ್ನು ಕಳುಹಿಸಬಹುದು.
“ಒಬ್ಬರ ಸಣ್ಣ ಸಹಾಯವೂ ಒಂದು ಜೀವ ಉಳಿಸಬಹುದು” ಎಂಬ ನಂಬಿಕೆಯಿಂದ ಎಲ್ಲರೂ ಕೈಜೋಡಿಸೋಣ.



























