ಪುತ್ತೂರು: ಕಟೀಲು ಮೇಳದಲ್ಲಿ ಕಳೆದ 32 ವರ್ಷಗಳಿಂದ ಚಕ್ರತಾಳ, ನೇಪಥ್ಯ ಕಲಾವಿದರಾಗಿ ಸೇವೆಸಲ್ಲಿಸಿದ್ದ ಒಳಮೊಗ್ರು ಗ್ರಾಮದ ಕುಂಬ್ರ ಶೇಖರ ರೈ ಮುಗೇರು (51ವ)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಮೆ.14 ರಂದು ನಿಧನರಾದರು.
ಮೃತರು ತಾಯಿ ಸುಂದರಿ ರೈ, ಪತ್ನಿ ಮೋಹಿನಿ, ಮೂವರು ಪುತ್ರಿಯರು, ಸಹೋದರರಾದ ಹರೀಶ್ ರೈ ಮುಗೇರು, ರಮೇಶ್ ರೈ ಮುಗೇರು, ಅಕ್ಕ ಜಯಂತಿ ರೈರವರನ್ನು ಅಗಲಿದ್ದಾರೆ.



























