ಪುತ್ತೂರು: ಶ್ರೀ ಅಮೃತಾ ಗ್ರೂಪ್ಸ್ನ ಹೊಸ ಉದ್ಯಮದ ಅಂಗವಾಗಿ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ.
ಪ್ಯಾಕೇಜಿಂಗ್ ಸಿಬ್ಬಂದಿ, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್, ಟೆಲಿಕಾಲಿಂಗ್ ಎಕ್ಸಿಕ್ಯೂಟಿವ್, ರಿಸೆಪ್ಷನಿಸ್ಟ್, ಡೆಲಿವರಿ ಬಾಯ್ಸ್ ಹಾಗೂ ವಿದ್ಯಾರ್ಥಿಗಳಿಗೆ ಅರೆಕಾಲಿಕ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗಿದೆ.
ಪ್ಯಾಕೇಜಿಂಗ್ ಸಿಬ್ಬಂದಿ ಹುದ್ದೆಗೆ ಮಹಿಳೆಯರಿಗೆ ಮಾತ್ರ ಅವಕಾಶವಿದ್ದು, ಕನಿಷ್ಠ ವಿದ್ಯಾರ್ಹತೆ ಎಸ್ಎಸ್ಎಲ್ಸಿ ಆಗಿರಬೇಕು. ಉತ್ಪನ್ನಗಳ ಪ್ಯಾಕೇಜಿಂಗ್ ಮತ್ತು ಘಟಕದ ಸಹಾಯಕ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ.
ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಹುದ್ದೆಗೆ ಬ್ರ್ಯಾಂಡ್ ಪ್ರಚಾರ ಹಾಗೂ ಕ್ಷೇತ್ರಮಟ್ಟದ ಮಾರ್ಕೆಟಿಂಗ್ ಕಾರ್ಯಗಳನ್ನು ನಿರ್ವಹಿಸುವ ಅಭ್ಯರ್ಥಿಗಳು ಬೇಕಾಗಿದ್ದಾರೆ. ಟೆಲಿಕಾಲಿಂಗ್ ಎಕ್ಸಿಕ್ಯೂಟಿವ್ ಹುದ್ದೆಗೆ ಗ್ರಾಹಕರನ್ನು ಸಂಪರ್ಕಿಸುವುದು, ಫಾಲೋ-ಅಪ್ ಹಾಗೂ ಗ್ರಾಹಕ ಸೇವೆ ಒದಗಿಸುವ ಜವಾಬ್ದಾರಿ ಇರಲಿದೆ.
ರಿಸೆಪ್ಷನಿಸ್ಟ್ ಹುದ್ದೆಗೆ ಫ್ರಂಟ್ ಡೆಸ್ಕ್ ನಿರ್ವಹಣೆ, ಗ್ರಾಹಕರಿಗೆ ಸಹಾಯ ಹಾಗೂ ಸಮನ್ವಯ ಕಾರ್ಯಗಳನ್ನು ನಿರ್ವಹಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಪ್ಯಾಕೇಜಿಂಗ್, ಕಾರ್ಯಾಚರಣೆ ಮತ್ತು ಮೂಲ ಸಹಾಯಕ ಕೆಲಸಗಳಿಗೆ ಅರೆಕಾಲಿಕ ಉದ್ಯೋಗಾವಕಾಶವಿದೆ. ಉತ್ಪನ್ನಗಳ ವಿತರಣೆ ಮತ್ತು ಲಾಜಿಸ್ಟಿಕ್ಸ್ ಸಹಾಯಕ್ಕಾಗಿ ಡೆಲಿವರಿ ಬಾಯ್ಸ್ಗಳನ್ನೂ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಅನ್ನು 9071085321 ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸಬಹುದು.

























