ವಿಟ್ಲ: ಚಿಕ್ಕಪ್ಪಣ್ಣನ್ನೇ ಯುವತಿಯೋರ್ವಳು ಕೊಂದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕನ್ಯಾನ ಬಳಿಯ ಶಿರಂಕಲ್ಲು ಎಂಬಲ್ಲಿ ನಡೆದಿದೆ.
ಚೆನ್ನಯ್ಯ ಪೂಜಾರಿ (50) ಮೃತ ವ್ಯಕ್ತಿ. ಸದ್ಯ ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

























