ಪುತ್ತೂರು: ಡಿ.8ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಪುತ್ತೂರು ದೀಪೋತ್ಸವದ ಅಂಗವಾಗಿ ಪುತ್ತೂರು ದೀಪೋತ್ಸವ ಸಮಿತಿಯ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮ ನ.25ರಂದು ನಡೆಯಲಿದೆ.
ಬುಧವಾರ ಮಧ್ಯಾಹ್ನ 12.10ಕ್ಕೆ ಕಾರ್ಯಾಲಯವನ್ನು ಉದ್ಯಮಿಗಳಾದ ಜನಾರ್ಧನ ಪೂಜಾರಿ ಪದಡ್ಕ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಧಾಸ್ ವಸ್ತ್ರ ಮಳಿಗೆಯ ಮಾಲಕರಾದ ಪ್ರಕಾಶ್ ಕಾಮತ್, ಉದ್ಯಮಿಗಳಾದ ಶಿವರಾಮ ಆಳ್ವ ಬಳ್ಳಮಜಲು ಗುತ್ತು ಹಾಗೂ ಕಾರ್ತಿಕ್ ಮೆಡಿಕಲ್ ನ ವೇಣುಗೋಪಾಲ ಪಿ.ಎಲ್. ಭಾಗವಹಿಸಲಿದ್ದಾರೆ.
ಗೌರವ ಉಪಸ್ಥಿತರಾಗಿ ವಿಜಯ ಬ್ಯಾಂಕ್ ನ ನಿವೃತ್ತ ಎ.ಜಿ.ಎಂ ಜಗಜೀವನದಾಸ್ ರೈ, ವಿಜಯ ಬ್ಯಾಂಕ್ ನ ವಿಶ್ರಾಂತ ಪ್ರಬಂಧಕರಾದ
ಜೈರಾಜ್ ಭಂಡಾರಿ ನೋಣಾಲ್ ಹಾಗೂ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರವೀಂದ್ರನಾಥ್ ರೈ ಬಳ್ಳಮಜಲು ಉಪಸ್ಥಿತರಿರುವರು.
ಪುತ್ತೂರು ದೀಪೋತ್ಸವ ಸಮಿತಿಯ ಅಧ್ಯಕ್ಷ ಎನ್. ರವೀಂದ್ರ ಶೆಟ್ಟಿ ನುಳಿಯಾಲು ಹಾಗೂ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಿತಿಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮದ ಕಚೇರಿ ಉದ್ಘಾಟಕರು ಪದ್ಮಶ್ರೀ ಶ್ರೀ ಜನಾರ್ದನ ಪೂಜಾರಿ. ಮುಖ್ಯ ಅತಿಥಿಗಳಾಗಿ ಶ್ರೀ ಪ್ರಕಾಶ್ ಕಾಮತ್, ಶ್ರೀ ಶಿವರಾಮ ಆಳ್ವ ಬಳ್ಳಮಜಲು ಗುಟ್ಟು ಹಾಗೂ ಶ್ರೀ ವೇಣುಗೋಪಾಲ ಪಿ.ಎಲ್. ಭಾಗವಹಿಸಲಿದ್ದಾರೆ.

























