ಪುತ್ತೂರು: ಆರಿ ಎಂಬ್ರಾಯ್ಡರಿ ಕಲೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಪುತ್ತೂರಿನಲ್ಲಿ ಎಸ್ಆರ್ ಆರಿ ಎಂಬ್ರಾಯ್ಡರಿ ಕೋಚಿಂಗ್ ಕ್ಲಾಸ್ ವತಿಯಿಂದ ಎರಡು ತಿಂಗಳ ತರಬೇತಿ ಕೋರ್ಸ್ ಆರಂಭಿಸಲಾಗುತ್ತಿದೆ. ಡಿಸೆಂಬರ್ 1ರಿಂದ ತರಗತಿಗಳು ಆರಂಭವಾಗಲಿದ್ದು, ಬೇಸಿಕ್ನಿಂದ ಅಡ್ವಾನ್ಸ್ಡ್ ಹಂತದವರೆಗೆ ವೃತ್ತಿಪರ ತರಬೇತಿ ನೀಡಲಾಗುತ್ತದೆ.
ಕೋರ್ಸ್ನಲ್ಲಿ 200ಕ್ಕೂ ಹೆಚ್ಚು ಸ್ಟಿಚ್ಗಳು, ಬ್ಲೌಸ್ ಮಾರ್ಕಿಂಗ್, ಡಿಸೈನ್ ಟ್ರೇಸಿಂಗ್, ಮಿರರ್ ವರ್ಕ್, ಜರ್ದೋಸಿ ವರ್ಕ್, 3ಡಿ ಮತ್ತು 5ಡಿ ವರ್ಕ್, ಸಿಲ್ಕ್ ಥ್ರೆಡ್ ಸ್ಟಿಚ್, ಮೆಟೀರಿಯಲ್ ಜ್ಞಾನ ಹಾಗೂ ಬ್ಲೌಸ್ ಡಿಸೈನ್ ಪರೀಕ್ಷೆ ಸೇರಿದಂತೆ ವಿವಿಧ ವಿಷಯಗಳನ್ನು ಕಲಿಸಲಾಗುತ್ತದೆ.
ತರಬೇತಿ ಪಡೆಯುವವರಿಗೆ ಕಲಿಕೆಗಾಗಿ ಬೀಡ್ಸ್ ಮೆಟೀರಿಯಲ್ ಉಚಿತವಾಗಿ ನೀಡಲಾಗುತ್ತದೆ. ಈಗಾಗಲೇ 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವ ಸಂಸ್ಥೆಯಲ್ಲಿ ಆನ್ಲೈನ್ ತರಗತಿಯ ಸೌಲಭ್ಯವೂ ಇದೆ. ಭಾನುವಾರದ ತರಗತಿಗಳೂ ಲಭ್ಯವಿವೆ.
ಕೋರ್ಸ್ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ ನೀಡಲಾಗುತ್ತದೆ. ತರಗತಿಯ ಸಮಯ ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ನಿಗದಿಪಡಿಸಲಾಗಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಪ್ರಿಯಾ ಪಿ. – 7204473205 ಅವರನ್ನು ಸಂಪರ್ಕಿಸಬಹುದು.
ತರಬೇತಿ ಕೇಂದ್ರವು ಪುತ್ತೂರು ಕೋರ್ಟ್ ರಸ್ತೆಯಲ್ಲಿರುವ ಎ.ಆರ್.ಡಿ. ಸೋಜಾ ಕ್ಲೋತ್ ಮರ್ಚೆಂಟ್ಸ್ ಸಮೀಪ, ಮಾಯಿದೇ ದೇವುಸ್ ಹೈಯರ್ ಪ್ರೈಮರಿ ಶಾಲೆಯ ಹಿಂಭಾಗದಲ್ಲಿದೆ.

























