ಪುತ್ತೂರು: ಪ್ರತಿ ಮಗುವಿನ ಮೊದಲ ಹೆಜ್ಜೆ ಆತ್ಮವಿಶ್ವಾಸದಿಂದ ಆರಂಭವಾಗಬೇಕೆಂಬ ನಿಟ್ಟಿನಲ್ಲಿ ಭಾರತದ ಪ್ರಮುಖ ಆರಂಭಿಕ ಶಿಕ್ಷಣ ಸಂಸ್ಥೆಯಾದ ಯೂರೋಕಿಡ್ಸ್ 2 ವರ್ಷದಿಂದ 6 ವರ್ಷದ ಮಕ್ಕಳಿಗೆ ಜಾಗತಿಕ ಮಟ್ಟದ ಪ್ರಿಸ್ಕೂಲ್ ಅನ್ನು ದರ್ಬೆಯ ವಿಶಾಲ್ ಮಾರ್ಟ್ ಎದುರು ಆರಂಭಿಸುತ್ತಿದ್ದು ಮಾ.21ಕ್ಕೆ ಉದ್ಘಾಟನೆ ನಡೆಯಲಿದೆ ಎಂದು ಸಂಸ್ಥೆಯ ಟ್ರಸ್ಟಿಗಳಾದ ಮಂಜು ಗೋಪಿನಾಥ್ ಮತ್ತು ಜಯರಾಮ್ ಕಕ್ಕಾಜೆ ದಂಪತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ 25 ವರ್ಷಗಳಿಗೂ ಅಧಿಕ ಅನುಭವ ಹೊಂದಿರುವ ಯುರೋಕಿಡ್ಸ್ ಕೇವಲ ಒಂದು ಶಿಕ್ಷಣ ಸಂಸ್ಥೆಯಲ್ಲ. ಅದು ಲಕ್ಷಾಂತರ ಮಕ್ಕಳ ಭವಿಷ್ಯವನ್ನು ರೂಪಿಸಿದ ಒಂದು ವಿಶ್ವಾಸದ ಹೆಸರಾಗಿದೆ.3 ದೇಶಗಳಲ್ಲಿ 500ಕ್ಕೂ ಹೆಚ್ಚು ನಗರಗಳಲ್ಲಿ ಹರಡಿರುವ 1,700ಕ್ಕೂ ಅಧಿಕ ಕೇಂದ್ರಗಳ ಮೂಲಕ 7 ಲಕ್ಷಕ್ಕೂ ಹೆಚ್ಚು ಮಕ್ಕಳ ಜೀವನದಲ್ಲಿ ಬೆಳಕು ತುಂಬಿದೆ.
ಪೋಷಕರ ವಿಶ್ವಾಸ ಮತ್ತು ಮಕ್ಕಳ ನಗು ಸಂಸ್ಥೆಯ ದೊಡ್ಡ ಸಾಧನೆ. ಇಲ್ಲಿ ಒತ್ತಡದ ಶಿಕ್ಷಣವಿಲ್ಲ.ಮಕ್ಕಳು ಪ್ರೀತಿಯಿಂದ ಯೋಚಿಸುವುದನ್ನು, ಅನ್ವೇಷಿಸುವುದನ್ನು, ಅನುಭವವನ್ನು ಪಡೆಯಲಿದ್ದಾರೆ. ಇಲ್ಲಿ ಮಕ್ಕಳ ಸುರಕ್ಷತೆಗಾಗಿ ಸುರಕ್ಷಿತ ತರಗತಿ, ತರಬೇತಿ ಪಡೆದ ಶಿಕ್ಷಕರು ಮತ್ತು ಸಿಬ್ಬಂದಿ, ಕಟ್ಟುನಿಟ್ಟಿನ ಭದ್ರತಾ ಕ್ರಮಗಳು ಇರಲಿದೆ ಎಂದವರು ಹೇಳಿದರು.
ಸಂಸ್ಥೆಯ ಹಿತೈಷಿ ರಂಜಿತಾ ಅವರು ಮಾತನಾಡಿ ಯೂರೋಕಿಡ್ಸ್ ಮಾ.21 ರಂದು ಬೆಳಿಗ್ಗೆ ಗಂಟೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ. ಶಾಸಕ ಅಶೋಕ್ ಕುಮಾರ್ ರೈ ಅವರು ಉದ್ಘಾಟಿಸಲಿದ್ದಾರೆ. ಕೃಷಿಕರಾಗಿರುವ ಸುಧಾಮ ಕಕ್ಕಾಜೆ ಅವರು ದೀಪ ಪ್ರಜ್ವಲಿಸಲಿದ್ದಾರೆ. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಅವರು ತರಗತಿ ಕೊಠಡಿಗಳನ್ನು ಉದ್ಘಾಟಿಸಲಿದ್ದಾರೆ. ಸಹಾಯಕ ಕಮಿಷನರ್ ಸ್ಟೆಲ್ಲಾ ವರ್ಗೀಸ್, ನ್ಯಾಯವಾದಿ ಮಹೇಶ್ ಕಜೆ, ಶಿಕ್ಷಣ ಪ್ರೇಮಿ ಫಾರೂಕ್ ಬಾಯಬ್ಬೆ, ಕಟ್ಟಡದ ಮತ್ತು ಸಚಿನ್ ಟ್ರೇಡಿಂಗ್ ಸೆಂಟರ್‌ನ ಮಾಲಕ ಮಂಜುನಾಥ್ ನಾಯಕ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಮುಖ್ಯಗುರು ನಾರಾಯಣ್ ಮತ್ತು ಪ್ರಶಾಂತ್ ಉಪಸ್ಥಿತರಿದ್ದರು.



























