ವಿಟ್ಲ: ವಿಟ್ಲಪಡ್ನೂರು ಗ್ರಾಮ ಪಂಚಾಯತ್ ವತಿಯಿಂದ ಆದ್ಯತಾ ವಲಯದವರಿಗೆ ಮತ್ತು 45 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ಕಾರ್ಯಕ್ರಮವು ಕೊಡಂಗಾಯಿ ಮತ್ತು ಕೋಡಪದವಿನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ರೇಷ್ಮಾ ಶಂಕರಿ, ಉಪಾಧ್ಯಕ್ಷರಾದ ನಾಗೇಶ್ ಕುಮಾರ್, ಪಿಡಿಒ ಸುಜಯ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರವೀಶ ಶೆಟ್ಟಿ, ಅರವಿಂದ ರೈ ಮೂರ್ಜೆಬೆಟ್ಟು ಉಪಸ್ಥಿತರಿದ್ದರು. ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಸಹಕರಿಸಿದರು.