ಮಂಗಳೂರು: ಜುಲೈ 1 ರಿಂದ ಸೀಮಿತ ಸಂಖ್ಯೆಯ ಖಾಸಗಿ ಮತ್ತು ಸಿಟಿ ಬಸ್ ಸೇವೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಬಹುದು ಎನ್ನಲಾಗಿದೆ.
ಜೂನ್ 24 ರ ಗುರುವಾರ ಮೂಡುಬಿದ್ರೆಯಲ್ಲಿ ನಡೆದ ಬಸ್ ಮಾಲೀಕರ ಸಂಘದ ಸಭೆಯಲ್ಲಿ ಹೆಚ್ಚಿನ ಬಸ್‌ಗಳ ಮಾಲೀಕರು ಬಸ್ ಸೇವೆಗಳು ಕಾರ್ಯಾಚರಿಸಲು ಒಪ್ಪಿಕೊಂಡರು.
ಕೆಲವು ಖಾಸಗಿ ಬಸ್ಸುಗಳು ಮತ್ತು ಮಂಗಳೂರು ನಗರ ಬಸ್ಸುಗಳು ಜುಲೈ 1 ರಿಂದ ಸೀಮಿತ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ ಎಂದು ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್ ಮತ್ತು ನಗರ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವಾ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ, ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಸರ್ಕಾರವನ್ನು ಒತ್ತಾಯಿಸಲು ಮುಂದಿನ ಕ್ರಮವಾಗಿ ಮತ್ತೊಂದು ವಿನಂತಿಯನ್ನು ಸಲ್ಲಿಸಲಾಗುವುದು ಎಂದು ಅವರು ವಿವರಿಸಿದರು.
ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯಿಂದ 200 ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಕಾರ್ಯಚರಿಸಿದ್ದು, ಜಿಲ್ಲೆಯೊಳಗೆ ಮಧ್ಯಾಹ್ನದವರೆಗೆ ಸರ್ಕಾರಿ ಬಸ್ಸುಗಳು ಚಲಿಸುತ್ತಿದ್ದರೂ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇತ್ತು ಎನ್ನಲಾಗಿದೆ.