ಆಲಂಕಾರು: ಉಪ್ಪಿನಂಗಡಿ ಕಡಬ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಕುಂಡಾಜೆ ಸೇತುವೆಯಲ್ಲಿ ಮಾರುತಿ ಬೆಲೋನೊ ಹಾಗೂ ಆಲ್ಟೋ ಕಾರುಗಳ ನಡುವೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಮಾರುತಿ ಬೆಲೋನೊ ಕಾರು ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕ ಗಣರಾಜ್ ಕುಂಬ್ಳೆಯವರ ಕಾರು ಎಂದು ತಿಳಿದು ಬಂದಿದ್ದು, ಬೆಲೋನೊ ಕಾರು (ಕೆ.ಎ ಎಂ.ಜೆ 4683) ಆಲಂಕಾರು ಭಾಗದಿಂದ ಕೊಯಿಲದ ಕಡೆಗೆ ಹೊಗುತ್ತಿದ್ದು, ಉಪ್ಪಿನಂಗಡಿಯಿಂದ ಕಡಬದ ಕಡೆಗೆ ವೇಗವಾಗಿ ಬರುತ್ತಿದ್ದ ಅಲ್ಟೋ ಕಾರು (ಕೆ.ಎ 21 .ಪಿ.2263) ಡಿಕ್ಕಿಯಾದ ರಭಸಕ್ಕೆ ವಿರುದ್ಧ ದಿಕ್ಕಿಗೆ ತಿರುಗಿ ನಿಂತಿದೆ.
ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.