ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ಕೆದಿಕಂಡೆಗುತ್ತು ಮನೆಯ ಧರ್ಮದೈವ ಶ್ರೀ ಧೂಮಾವತಿ, ರಕ್ತೇಶ್ವರಿ, ಮಹಿಷಂತಾಯಿ, ವರ್ಣರ ಪಂಜುರ್ಲಿ, ಕಲ್ಲುರ್ಟಿ, ಗುಳಿಗ ದೈವಗಳ ವಾರ್ಷಿಕ ನೇಮೋತ್ಸವವು ಡಿ.26ರಂದು ನಡೆಯಲಿದೆ.
ಈ ಪ್ರಯುಕ್ತ ಶ್ರೀ ಮಹಾಗಣಪತಿ ಹೋಮ, ಆಶ್ಲೇಷಾ ಬಲಿ, ನಾಗತಂಬಿಲ, ಶ್ರೀ ದೈವಗಳ ತಂಬಿಲ ಸೇವೆಗಳು, ಶ್ರೀ ವೆಂಕಟರಮಣ ದೇವರ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ಮಂಗಳಾರತಿ, ಶ್ರೀ ಕೃಷ್ಣ ಭಜನಾ ಮಂಡಳಿ ಕರಾಯ ವತಿಯಿಂದ ನೃತ್ಯ ಭಜನೆ, ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿ ಮಠಂತಬೆಟ್ಟು ಮತ್ತು ಶ್ರೀ ಕೃಷ್ಣ ಭಜನಾ ಮಂಡಳಿ ಕರಾಯ ವತಿಯಿಂದ ಭಜನೆ, ಶ್ರೀ ದುರ್ಗಾಪೂಜೆ, ಶ್ರೀ ದೈವಗಳ ನೇಮೋತ್ಸವ, ಅನ್ನ ಸಂತರ್ಪಣೆ ಕಾರ್ಯಕ್ರಮವು ಜರುಗಲಿದೆ.