ರೋಟರಿ ಕ್ಲಬ್ ಪುತ್ತೂರು ಯುವ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಪುತ್ತೂರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಪುತ್ತೂರು ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಇದರ ಸಹಭಾಗಿತ್ವದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಡಿ. 1 ರಂದು ಏಡ್ಸ್ ಮತ್ತು ಹೆಚ್ ಐ ವಿ ಕುರಿತಂತೆ ಸಾಮಾಜಿಕ ಎಚ್ಚರಿಕೆ, ಸಾರ್ವಜನಿಕ ಜನಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮವು ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ವಠಾರದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ 5 ಸರ್ಕಾರಿ ಇಲಾಖೆಗಳಿಗೆ ಶೀಘ್ರವೇ ಮಹಿಳೆ ಮತ್ತು ಮಕ್ಕಳನ್ನು ತಲುಪಿಸಿ ಪುನರ್ವಸತಿ ಕಲ್ಪಿಸಿಕೊಟ್ಟ ಶ್ರಿ. ಶ್ರೀಲತಾ ಹಾಗೂ ಕಾಣೆಯಾದ ಮಕ್ಕಳ ಶೋಧ ಕಾರ್ಯಾಚರಣೆಗೆ ತುರ್ತಾಗಿ ಶ್ರಮಿಸಿದ ಆಶಾ ಕಾರ್ಯಕರ್ತೆ ಶ್ರಿ. ಜೆನೆಟ್, ರವಿ ರೈ, ಶ್ರೀ ಮೀನಾಕ್ಷಿ, ಶ್ರೀ ವೀಣಾ ಇವರನ್ನು ಅಭಿನಂದಿಸಲಾಯಿತು.. ಭಾಷಣ ಸ್ಪರ್ಧೆಯ ಲೋಗೋ ಬಿಡುಗಡೆ ಕಾರ್ಯಕ್ರಮ ನಡೆಯಿತು..
ಪುತ್ತೂರು ನಗರ ಕೇಂದ್ರದ ಆರೋಗ್ಯ ಆಧಿಕಾರಿ ಡಾ. ಸುಹೈಲಾ, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಶ್ರೀ ರವಿ ರೈ, ಕೆ ಎಸ್ ಆರ್ ಟೀ ಸಿ ಯ ದಿನೇಶ್ ಶೆಟ್ಟಿ ರೋಟರಿ ಯುವ ಅಧ್ಯಕ್ಷ ಹರ್ಷ ಕುಮಾರ್ ರೈ ಮಾಡಾವು, ರೋಟರಿ ಯುವ ಕಾರ್ಯದರ್ಶಿ ಉಮೇಶ್ ನಾಯಕ್,ಮತ್ತಿತರರು ಉಪಸ್ಥಿತರಿದ್ದರು.