ಪುತ್ತೂರು ತಾಲೂಕಿನ ಕೋಡಿಂಬಾಡಿಯ ಬಾರಿಕೆ ಮನೆಯ ರವಿರಾಜ ಆರಿಗ ಹಾಗೂ ಗುಣವತಿ ಆರಿಗ ದಂಪತಿಯ ಪುತ್ರಿ ರಸಿಕಾ ಕಂಬ್ಳೆ (67) ಅವರು ಅಲ್ಪಕಾಲದ ಅಸೌಖ್ಯದಿಂದ ಜೂನ್ 10ರಂದು ನಿಧನರಾದರು.
ಸಾಮಾಜಿಕ ಹಾಗೂ ಸೇವಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು, ಮೂಡಬಿದ್ರೆ ಇನ್ನರ್ ವೀಲ್ ಕ್ಲಬ್‌ನ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿ ಗಮನಾರ್ಹ ಸೇವೆ ಸಲ್ಲಿಸಿದ್ದರು. ಅವರ ನಿಧನಕ್ಕೆ ಬಂಧು-ಬಳಗ, ಸ್ನೇಹಿತರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರು ಪತಿ ಪಿ. ಜಯರಾಜ ಕಂಬ್ಳೆ, ಪುತ್ರ ನವೀಶ್ ಕಂಬ್ಳೆ ಹಾಗೂ ಪುತ್ರಿ ನವ್ಯ ಪ್ರಶಾಂತ್ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಅವರ ನಿಧನವು ಕುಟುಂಬಕ್ಕೆ ಮಾತ್ರವಲ್ಲದೆ, ಸಾಮಾಜಿಕ ವಲಯಕ್ಕೂ ತುಂಬಲಾರದ ನಷ್ಟವಾಗಿದೆ.


























