Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ 108 ತೀರ್ಥ ಕಲಶಾಭಿಷೇಕ, ಹನುಮಂತನ ಪಾದುಕೆ ಪ್ರತಿಷ್ಠೆ..!

    ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ 108 ತೀರ್ಥ ಕಲಶಾಭಿಷೇಕ, ಹನುಮಂತನ ಪಾದುಕೆ ಪ್ರತಿಷ್ಠೆ..!

    (ನ.29) : ವಿವೇಕಾನಂದ ಕ್ರೀಡಾಂಗಣದಲ್ಲಿ ಕ್ರಿಕೆಟ್ ಹಬ್ಬ : ಬಿಲ್ಲವ ಯೂತ್ ಪುತ್ತೂರು ಆಶ್ರಯದಲ್ಲಿ ಕೋಟಿ ಚೆನ್ನಯ್ಯ ಟ್ರೋಫಿ..!!

    (ನ.29) : ವಿವೇಕಾನಂದ ಕ್ರೀಡಾಂಗಣದಲ್ಲಿ ಕ್ರಿಕೆಟ್ ಹಬ್ಬ : ಬಿಲ್ಲವ ಯೂತ್ ಪುತ್ತೂರು ಆಶ್ರಯದಲ್ಲಿ ಕೋಟಿ ಚೆನ್ನಯ್ಯ ಟ್ರೋಫಿ..!!

    ಉಪ್ಪಿನಂಗಡಿ: ದುಬಾರಿ ಟೋಲ್ ವಿರುದ್ಧ ಸ್ಥಳೀಯರ ಪ್ರತಿಭಟನೆ : ಸ್ಥಳೀಯರಿಗೆ ಟೋಲ್ ವಿನಾಯಿತಿ ನೀಡಲು ಆಗ್ರಹ..!

    ಉಪ್ಪಿನಂಗಡಿ: ದುಬಾರಿ ಟೋಲ್ ವಿರುದ್ಧ ಸ್ಥಳೀಯರ ಪ್ರತಿಭಟನೆ : ಸ್ಥಳೀಯರಿಗೆ ಟೋಲ್ ವಿನಾಯಿತಿ ನೀಡಲು ಆಗ್ರಹ..!

    ವಿಟ್ಲ: ಚಿಕ್ಕಪ್ಪನನ್ನು ಇರಿದು ಹತ್ಯೆಗೈದ ಯುವತಿ ಬಂಧನ..!!

    ವಿಟ್ಲ: ಚಿಕ್ಕಪ್ಪನನ್ನು ಇರಿದು ಹತ್ಯೆಗೈದ ಯುವತಿ ಬಂಧನ..!!

    ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಐಟಿಐ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಸಾವು​..!

    ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಐಟಿಐ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಸಾವು​..!

    ಸುಳ್ಯ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ನೂತನ ಪ್ರವೀಣ್‌ ನೆಟ್ಟಾರ್ ಆಯ್ಕೆ..!

    ಸುಳ್ಯ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ನೂತನ ಪ್ರವೀಣ್‌ ನೆಟ್ಟಾರ್ ಆಯ್ಕೆ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ 108 ತೀರ್ಥ ಕಲಶಾಭಿಷೇಕ, ಹನುಮಂತನ ಪಾದುಕೆ ಪ್ರತಿಷ್ಠೆ..!

November 29, 2026
in Featured, ಧಾರ್ಮಿಕ, ಪುತ್ತೂರು
0
ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ 108 ತೀರ್ಥ ಕಲಶಾಭಿಷೇಕ, ಹನುಮಂತನ ಪಾದುಕೆ ಪ್ರತಿಷ್ಠೆ..!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪುತ್ತೂರು: ಲೋಕಕಲ್ಯಾಣದ ಮಹಾಸಂಕಲ್ಪ, ಹಿಂದೂ ಸಮಾಜದ ಏಕತೆ ಹಾಗೂ ಧಾರ್ಮಿಕ ಜಾಗೃತಿಯ ಆಶಯದೊಂದಿಗೆ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನಡೆಯುತ್ತಿರುವ ಪಂಚಮುಖಿ ಆಂಜನೇಯ ಹವನವು ಮೂರನೇ ದಿನವೂ ಭಕ್ತಿ, ಶ್ರದ್ಧೆ ಮತ್ತು ಧಾರ್ಮಿಕ ವೈಭವದೊಂದಿಗೆ ಗಮನ ಸೆಳೆಯಿತು. ನ. 28ರಂದು ಕ್ಷೇತ್ರದಲ್ಲಿ ಪವಿತ್ರ 108 ತೀರ್ಥ ಕಲಶಾಭಿಷೇಕ ಹಾಗೂ ಹನುಮಂತನ ಪಾದುಕೆ ಪ್ರತಿಷ್ಠೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಮೂರು ವೇದಿಕೆಗಳಲ್ಲಿ ಏಕಕಾಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದರೆ, ಸಂಜೆ ಧರ್ಮಸಭೆ, ರಾಮಾಯಣ ಪ್ರವಚನ ಹಾಗೂ ರಾತ್ರಿ ಸಂಗೀತ ಗಾನ ಸಂಭ್ರಮ ಭಕ್ತರ ಮನಸೂರೆಗೊಂಡಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ವೀರಾಂಜನೇಯ ಸ್ವಾಮಿಯ ದರ್ಶನ ಪಡೆದು ಪುನೀತರಾದರು.

Advertisement
Advertisement

ಸಮಾಜದ ಸಂಕಷ್ಟಕ್ಕೆ ನಾನೇ ಮುಂದೆ ನಿಲ್ಲಬೇಕು:
ಯಾಗ ಸಂಕಲ್ಪ ಮತ್ತು ರಕ್ಷೆ ಧಾರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು, ಸಮಾಜಕ್ಕೆ ಆಪತ್ತು ಎದುರಾದಾಗ ಯಾರೋ ಮುಂದೆ ಬರಲಿ ಎಂದು ಕಾಯದೆ ನಾನೇ ಮುಂದೆ ನಿಲ್ಲಬೇಕು ಎಂಬ ಮನೋಭಾವ ಪ್ರತಿಯೊಬ್ಬರಲ್ಲೂ ಜಾಗೃತವಾಗಬೇಕು ಎಂದು ಕರೆ ನೀಡಿದರು. ಕುಟುಂಬಕ್ಕೆ ಅಥವಾ ಮನೆಗೆ ಸಂಕಷ್ಟ ಎದುರಾದಾಗ ಹೇಗೆ ತಕ್ಷಣ ಸ್ಪಂದಿಸುತ್ತೇವೆಯೋ ಅದೇ ರೀತಿಯಲ್ಲಿ ಸಮಾಜಕ್ಕೆ ಆಪತ್ತು ಬಂದಾಗಲೂ ನಮ್ಮ ಜವಾಬ್ದಾರಿಯನ್ನು ಅರಿತು ಮುನ್ನಡೆಯಬೇಕು. ಧರ್ಮವನ್ನು ಮೆಟ್ಟಿ ನಿಲ್ಲಲು ಅನೇಕ ಶಕ್ತಿಗಳು ಪ್ರಯತ್ನಿಸುತ್ತಿದ್ದರೂ ಸನಾತನ ಧರ್ಮ ಇಂದಿಗೂ ಚಿರನೂತನವಾಗಿ ಉಳಿದಿರುವುದಕ್ಕೆ ನಮ್ಮ ಆಧ್ಯಾತ್ಮಿಕ ಶಕ್ತಿಯೇ ಕಾರಣ. ಆಧ್ಯಾತ್ಮಿಕ ಬಲದಿಂದ ದುಷ್ಟ ಶಕ್ತಿಗಳನ್ನು ಜಯಿಸಲು ಸಾಧ್ಯ ಎಂದರು. ನಾನು ಒಬ್ಬನೇ ಏನು ಮಾಡಬಲ್ಲೆ ಎಂಬ ಭಯವಿದ್ದರೆ ಧರ್ಮಕಾರ್ಯದಲ್ಲಿ ಮುನ್ನಡೆಯಲು ಸಾಧ್ಯವಿಲ್ಲ. ನಮ್ಮೊಂದಿಗೆ ಬೃಹತ್ ಸಮಾಜವಿದೆ ಎಂಬ ಆತ್ಮವಿಶ್ವಾಸ ಮೂಡಿದಾಗ ನಿರ್ಭಯದಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಶಾರೀರಿಕ ಹಾಗೂ ದೈವಿಕವಾಗಿ ನಿರಂತರ ಪ್ರಾರ್ಥನೆಯಲ್ಲಿ ತೊಡಗಿಸಿಕೊಳ್ಳಬೇಕು. ಯಜ್ಞ, ಯಾಗಾದಿಗಳ ಸಂದರ್ಭದಲ್ಲಿ ವ್ರತಾಚರಣೆ ಹಾಗೂ ಪ್ರಾರ್ಥನಾ ಸಂಕಲ್ಪಕ್ಕೆ ಶಾಸ್ತçದಲ್ಲಿ ವಿಶೇಷ ಮಹತ್ವವಿದೆ ಎಂದು ತಿಳಿಸಿದರು. ನನಗಾಗಿ ಪ್ರಾರ್ಥಿಸುವುದಕ್ಕಿಂತ ಸಮಾಜಕ್ಕೆ, ದೇಶಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸುವ ಮನೋಭಾವ ನಮ್ಮಲ್ಲಿ ಬೆಳೆಯಬೇಕು. ಇಡೀ ಪ್ರಪಂಚವನ್ನು ತನ್ನ ಅಧೀನದಲ್ಲಿಟ್ಟುಕೊಂಡಿರುವ ಭಗವಂತನಿಗೆ ಭಕ್ತರ ಅಗತ್ಯಗಳನ್ನು ಪೂರೈಸುವ ಶಕ್ತಿಯಿದೆ. ಹೀಗಾಗಿ ಸಮಾಜದ ಹಾಗೂ ದೇಶದ ಕಲ್ಯಾಣಕ್ಕಾಗಿ ನಾವು ಸಂಕಲ್ಪ ಮಾಡಿದಾಗ ಆ ಸಂಕಲ್ಪ ಪರಿಪೂರ್ಣವಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿವಾಹಿತ ದಂಪತಿಗಳು ಮಾತ್ರವಲ್ಲದೆ ಅವಿವಾಹಿತರೂ ಯಾಗ ಸಂಕಲ್ಪ ಹಾಗೂ ರಕ್ಷೆ ಧಾರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವಿದ್ವಾಂಸ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು ದಂಪತಿಗಳಿಗೆ ಸಂಕಲ್ಪ ನೆರವೇರಿಸಿದರು.

ಲೋಕಕ್ಷೇಮ, ಧರ್ಮಾಭಿವೃದ್ಧಿಗಾಗಿ ವಿಶೇಷ ಪ್ರಾರ್ಥನೆ
ಸತ್ಯಕೃಷ್ಣ ಭಟ್ ಮಂಗಳೂರು ಅವರ ವೈದಿಕತ್ವದಲ್ಲಿ ಯಾಗದ ಸ್ಥಳದಲ್ಲಿ ವಿಶೇಷ ಪೂಜೆ, ಪುರಸ್ಕಾರಗಳು ನೆರವೇರಿದವು. ಹತ್ತಕ್ಕೂ ಅಧಿಕ ಋತ್ವಿಜರು ಜಪತಪಗಳಲ್ಲಿ ತೊಡಗಿಸಿಕೊಂಡು ಮಹಾಪೂಜೆಯನ್ನು ಸಂಪನ್ನಗೊಳಿಸಿದರು. ಮಂಡಲ ಮಧ್ಯೆ ಹಾಗೂ ಕಲಶ ಮಧ್ಯದಲ್ಲಿ ಪಂಚಮುಖಿ ಆಂಜನೇಯ ಮತ್ತು ಸೀತಾರಾಮಚಂದ್ರ ದೇವರನ್ನು ಆವಾಹಿಸಿ ಸಹಸ್ರನಾಮ ಮಂತ್ರಾದಿಗಳಿAದ ಅರ್ಚಿಸಲಾಯಿತು. ಋತ್ವಿಜರು ಮೂಲಮಂತ್ರ ಜಪದ ಮೂಲಕ ವಿಶೇಷ ಆರಾಧನೆ ನೆರವೇರಿಸಿ, ಬಳಿಕ ಲೋಕಕ್ಷೇಮಕ್ಕಾಗಿ ಪ್ರಾರ್ಥಿಸಿದರು. ಸಮಸ್ತ ಭಕ್ತರಿಗೆ ಎದುರಾಗುವ ಆಪತ್ತುಗಳು ನಿವಾರಣೆಯಾಗಿ ಕ್ಷೇಮ, ಧೈರ್ಯ, ವೀರ್ಯ, ವಿಜಯ, ಆಯುರಾರೋಗ್ಯ ಹಾಗೂ ಐಶ್ವರ್ಯ ಲಭಿಸಲಿ. ಎಲ್ಲ ದೋಷಗಳು ಹಾಗೂ ಕಂಟಕಗಳು ಪರಿಹಾರವಾಗಿ ಸನಾತನ ಧರ್ಮ ಉತ್ತರೋತ್ತರ ಅಭಿವೃದ್ಧಿಯಾಗಲಿ. ದೇಶವನ್ನು ಮುನ್ನಡೆಸುವ ಪ್ರಮುಖರಿಗೆ ಪರಮಾತ್ಮನ ಅನುಗ್ರಹ ದೊರೆಯಲಿ. ಭಾರತ ದೇಶವು ಸರ್ವಾಂಗೀಣ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲಿ ಎಂದು ಪಂಚಮುಖಿ ಹನುಮಂತ ಹಾಗೂ ಸೀತಾರಾಮಚಂದ್ರ ದೇವರಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಲಾಯಿತು. ಸುಮಾರು 10ಕ್ಕೂ ಅಧಿಕ ಋತ್ವಿಜರು ಜಪ ಮಾಡಿದರು.

Advertisement

108 ತೀರ್ಥ ಕಲಶಗಳಿಂದ ವೀರಾಂಜನೇಯನಿಗೆ ಅಭಿಷೇಕ
ಕ್ಷೇತ್ರದ ಧಾರ್ಮಿಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಬ್ರಹ್ಮಶ್ರೀ ಕೆಮ್ಮಿಂಜೆ ಸುಜಯ ತಂತ್ರಿಯವರ ನೇತೃತ್ವದಲ್ಲಿ ಶ್ರೀ ವೀರಾಂಜನೇಯ ಸ್ವಾಮಿಗೆ ೧೦೮ ತೀರ್ಥ ಕಲಶಗಳ ಅಭಿಷೇಕ ನೆರವೇರಿತು. ತಾಲೂಕಿನ ವಿವಿಧ ಗ್ರಾಮಗಳ ಮಂದಿರ, ದೇವಸ್ಥಾನ ಹಾಗೂ ದೈವಸ್ಥಾನಗಳಿಂದ ಭಕ್ತಿಪೂರ್ವಕವಾಗಿ ಸಂಗ್ರಹಿಸಿ ತರಲಾಗಿದ್ದ ಪವಿತ್ರ ತೀರ್ಥ ಕಲಶಗಳಿಂದ ಅಭಿಷೇಕ ಮಾಡಲಾಯಿತು. ಬಳಿಕ ಪ್ರಧಾನ ಕಲಶಾಭಿಷೇಕವೂ ವೈಭವದಿಂದ ನಡೆಯಿತು. ಇದೇ ಸಂದರ್ಭದಲ್ಲಿ ಅಂಜನಾದ್ರಿಯಿAದ ಈ ಹಿಂದೆ ಬಜರಂಗದಳದ ಕಾರ್ಯಕರ್ತರು ತಂದಿದ್ದ ಆಂಜನೇಯನ ಶಿಲೆಯ ಪಾದುಕೆಗಳನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ವೀರಾಂಜನೇಯ ಸ್ವಾಮಿಯ ಪೀಠದ ಎದುರು ಪ್ರತಿಷ್ಠಾಪಿಸಲಾಯಿತು. ಭಕ್ತರು ಭಕ್ತಿಭಾವದಿಂದ ಈ ಪುಣ್ಯಕಾರ್ಯಕ್ಕೆ ಸಾಕ್ಷಿಯಾದರು. ಮಧ್ಯಾಹ್ನ ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಮೂರು ವೇದಿಕೆಗಳಲ್ಲಿ ಭಕ್ತಿಯ ವೈಭವ
ಬೆಳಗ್ಗಿನಿಂದಲೇ ಕ್ಷೇತ್ರದ ಮೂರು ವೇದಿಕೆಗಳಲ್ಲಿ ಏಕಕಾಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪ್ರಧಾನ ವೇದಿಕೆ ಅಶೋಕ್ ಸಿಂಗಾಲ್ ವೇದಿಕೆಯಲ್ಲಿ ಮಾತಾ ಭಗಿನಿಯರಿಂದ ಲಕ್ಷ ಶ್ರೀರಾಮ ಜಪ ಹಾಗೂ ಕೇಸರಿ ಅರ್ಚನೆ ನೆರವೇರಿತು. ಸಾವಿರಾರು ಮಹಿಳೆಯರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಸಾಮೂಹಿಕವಾಗಿ ಶ್ರೀರಾಮನಾಮ ಸ್ಮರಣೆ ಮಾಡಿದರು.
ಮಹಿಳಾ ಸಮಿತಿಯ ಸಂಚಾಲಕಿ ಕೃಷ್ಣವೇಣಿ ಪ್ರಸಾದ್ ಮುಳಿಯ, ಸಹ ಸಂಚಾಲಕಿ ವಿದ್ಯಾ ಆರ್. ಗೌರಿ, ಜಯಂತಿ ನಾಯಕ್, ಪ್ರೇಮಲತಾ ರಾವ್, ಶರಾವತಿ, ಗೌರಿ ಬನ್ನೂರು ಸೇರಿದಂತೆ ಹಲವರು ಕಾರ್ಯಕ್ರಮದ ಮಾರ್ಗದರ್ಶನ ವಹಿಸಿದ್ದರು. ಹಿರಿಯ ಮಹಿಳೆಯರಿಗೂ ಅನುಕೂಲವಾಗುವಂತೆ ಕುರ್ಚಿಯಲ್ಲಿ ಕುಳಿತು ಅರ್ಚನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀರಾಮ ಪರಿವಾರಕ್ಕೆ ಸಾಮೂಹಿಕ ಆರತಿ ಬೆಳಗಲಾಯಿತು. ಭಜನಾ ಕೀರ್ತಿಯ ರಾಮಕೃಷ್ಣ ಕಾಟುಕುಕ್ಕೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇನ್ನೊಂದು ವೇದಿಕೆಯಲ್ಲಿ ತಾಲೂಕಿನ ವಿವಿಧ ಭಜನಾ ಮಂಡಳಿಗಳಿAದ ನಿರಂತರ ಭಜನಾ ಕಾರ್ಯಕ್ರಮ ನಡೆಯಿತು. ವೀರಾಂಜನೇಯ ಕ್ಷೇತ್ರದ ಯಾಗ ವೇದಿಕೆಯಲ್ಲಿ ದಂಪತಿಗಳಿಗೆ ಯಾಗ ಸಂಕಲ್ಪ ಹಾಗೂ ರಕ್ಷೆ ಧಾರಣೆ ಕಾರ್ಯಕ್ರಮವೂ ನಿರಂತರವಾಗಿ ನೆರವೇರಿತು. ಹೀಗೆ ಮೂರು ವೇದಿಕೆಗಳಲ್ಲೂ ಭಕ್ತಿ, ಮಂತ್ರಘೋಷ, ಭಜನೆ ಹಾಗೂ ಸಾಮೂಹಿಕ ಪ್ರಾರ್ಥನೆಯ ಮೂಲಕ ಕ್ಷೇತ್ರದಲ್ಲಿ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗಿತ್ತು. ಸಂಜೆ ಪ್ರಧಾನ ವೇದಿಕೆಯಲ್ಲಿ ಆರಂಭದಲ್ಲಿ ವಿವೇಕಾನಂದ ಇಂಜಿನಿಯರಿ0ಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕöÈತಿಕ ವೈಭವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನೃತ್ಯ ಕೊನೆಯಾಗುವ ವೇಳೆ ಮನೀತ್ ಗೌಡ ಅವರು ವೀರಾಂಜನೇಯ ಸುಂದರ ಚಿತ್ರ ರಚನೆ ಮಾಡಿದರು. ಈ ಸಂದರ್ಭ ಕಾಲೇಜಿನ ಭೂಮಿಕಾ ತಂಡದ ಸುದರ್ಶನ್ ಎಂ.ಎನ್ ಮತ್ತು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಸಂಜೆ ಧರ್ಮಸಭೆ, ರಾಮಾಯಣ ಪ್ರವಚನ:
ದುಷ್ಟ ಶಕ್ತಿಗಳ ಎದುರಿಸಲು ಧಾರ್ಮಿಕ ಯಾಗ, ಸಂಘಟನೆ ಅಗತ್ಯ:
ಸಂಜೆ ನಡೆದ ಧರ್ಮ ಸಭೆಯನ್ನು ಉದ್ಘಾಟಿಸಿದ ಎಡನೀರು ಶ್ರೀ ಸಚ್ಚಿದಾನಂದ ಶ್ರೀಪಾದಂಗಳವರು ಆಶೀರ್ವಚ ನೀಡಿದರು. ಸಮಾಜದಲ್ಲಿ ಧರ್ಮ, ಸಂಸ್ಕöÈತಿ ಮತ್ತು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ದುಷ್ಟ ಶಕ್ತಿಗಳ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಧಾರ್ಮಿಕ ಯಾಗಗಳು, ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಇಂತಹ ಕಾರ್ಯಕ್ರಮಗಳು ಸಮಾಜವನ್ನು ಒಗ್ಗೂಡಿಸುವ ಶಕ್ತಿಕೇಂದ್ರಗಳಾಗಬೇಕು ಎಂದರು. ಹಿಂದೂ ಸಮಾಜದ ಆರಾಧನಾ ಕೇಂದ್ರಗಳು ಸಮಾಜದ ಎಲ್ಲ ಸ್ತರಗಳ ಜನರ ಶ್ರದ್ಧೆ, ಆಸಕ್ತಿ ಮತ್ತು ಸೇವಾ ಮನೋಭಾವದಿಂದ ನಿರ್ಮಾಣಗೊಳ್ಳುತ್ತವೆ. ಒಬ್ಬ ವ್ಯಕ್ತಿಗೆ ದೇವಸ್ಥಾನ ನಿರ್ಮಿಸುವ ಶಕ್ತಿ ಇರಬಹುದು. ಆದರೆ ಎಲ್ಲ ಬಾಂಧವರೂ ಒಟ್ಟಾಗಿ ಬಂದು ಆರಾಧಿಸುವಂತಹ ಶ್ರದ್ಧಾಕೇಂದ್ರಗಳು ಸಾಮೂಹಿಕ ಸೇವೆಯಿಂದಲೇ ರೂಪುಗೊಳ್ಳುತ್ತವೆ. ಊರಿನ ಆರಾಧನಾ ಕೇಂದ್ರಗಳು ಶಿಥಿಲಾವಸ್ಥೆಯಲ್ಲಿವೆ ಎಂದಾಗ, ತಮ್ಮದೇ ಬದುಕಿನಲ್ಲಿ ಎಷ್ಟೇ ಕಷ್ಟಗಳಿದ್ದರೂ ಭಕ್ತರು ತಮ್ಮ ಶಕ್ತಾ÷್ಯನುಸಾರ ಸೇವೆ ಸಲ್ಲಿಸುತ್ತಾರೆ. ಹೀಗೆ ಎಲ್ಲ ಧಾರ್ಮಿಕ ಬಂಧುಗಳ ಕೊಡುಗೆಯಿಂದ ಮಂದಿರಗಳು ನಿರ್ಮಾಣವಾಗುತ್ತವೆ. ವೀರಾಂಜನೇಯ ಕ್ಷೇತ್ರವು ಎಲ್ಲ ಭಕ್ತರನ್ನು ಒಗ್ಗೂಡಿಸಿ ಅವರ ಸಾಮೂಹಿಕ ಶಕ್ತಿಯನ್ನು ಜಾಗೃತಗೊಳಿಸುವ ಕೇಂದ್ರವಾಗಿದೆ ಎಂದರು.

ಅಸಾಧ್ಯವನ್ನೂ ಸಾಧ್ಯವಾಗಿಸುವ ಶಕ್ತಿ ಹನುಮಂತನ ಭಕ್ತಿಯಲ್ಲಿದೆ
ವಿಶ್ವ ಹಿಂದೂ ಪರಿಷತ್‌ನ ಕೇಂದ್ರಿಯ ಸಹಕಾರ್ಯದರ್ಶಿ ಹಾಗೂ ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣ ಕಾರ್ಯದ ಜವಾಬ್ದಾರಿ ನಿರ್ವಹಿಸಿದ್ದ ಗೋಪಾಲ್ ಜಿ ಧಾರ್ಮಿಕ ಭಾಷಣ ಮಾಡಿದರು.ಭಾರತ ಭಕ್ತಿಯ ನೆಲೆ. ಭಕ್ತಿ ಎಂದರೆ ಸಂಪೂರ್ಣ ಸಮರ್ಪಣೆಯ ಸಂಕೇತ. ರಾಮನಿಗೆ ತನ್ನ ಬದುಕನ್ನೇ ಸಮರ್ಪಿಸಿದ ಶ್ರೇಷ್ಠ ಭಕ್ತ ಆಂಜನೇಯ. ಕಲ್ಪನೆಗೂ ಮೀರಿದ, ಊಹಿಸಲೂ ಅಸಾಧ್ಯವಾದ ಕಾರ್ಯಗಳನ್ನು ಸಾಧ್ಯವಾಗಿಸಿದ ಮಹಾನ್ ಶಕ್ತಿ ಆಂಜನೇಯನದ್ದು. ದೈವಭಕ್ತಿ ಮತ್ತು ರಾಮಭಕ್ತಿ ಇದ್ದರೆ ಯಾವುದೇ ಕಾರ್ಯವನ್ನು ಸಾಧಿಸಬಹುದು ಎಂಬುದಕ್ಕೆ ಹನುಮಂತನೇ ಆದರ್ಶ ಎಂದು ವಿವರಿಸಿದರು. ವೀರಾಂಜನೇಯನ ಅನುಗ್ರಹದಿಂದ ಹತ್ತು ವರ್ಷಗಳ ಸಾಧನೆಯ ಫಲವನ್ನು ನಾಲ್ಕು ದಿನಗಳ ಅನುಷ್ಠಾನದ ಮೂಲಕ ಪಡೆಯುವ ಅವಕಾಶ ಭಕ್ತರಿಗೆ ಲಭಿಸಿರುವುದು ಸಂತೋಷದ ಸಂಗತಿ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಸಂದರ್ಭದಲ್ಲಿಯೂ ಆಂಜನೇಯನ ಆಶೀರ್ವಾದವಿತ್ತು ಎಂಬ ನಂಬಿಕೆ ಇದೆ. ಮೊದಲ ಕರಸೇವೆಯ ಸಂದರ್ಭದಲ್ಲಿ ಅಂದಿನ ಉತ್ತರ ಪ್ರದೇಶ ಸರಕಾರ ನಿರ್ಬಂಧ ವಿಧಿಸಿದ್ದರೂ ರಾಮಭಕ್ತರು ಅಯೋಧ್ಯೆ ಪ್ರವೇಶಿಸಿದ್ದರು. ಬಿಗಿ ಬಂದೋಬಸ್ತ್ ನಡುವೆಯೂ ಟ್ರಕ್ ಮೂಲಕ ಬಂದ ಕಾರ್ಯಕರ್ತರು ರಾಮಜನ್ಮಭೂಮಿಯಲ್ಲಿ ಧ್ವಜ ಹಾರಿಸಿದ್ದರು. ಆದರೆ ಆ ಟ್ರಕ್‌ನ ಚಾಲಕ ಯಾರೆಂಬುದು ಇಂದಿಗೂ ಪತ್ತೆಯಾಗಿಲ್ಲ. ರಾಮಕಾರ್ಯಕ್ಕಾಗಿ ಸ್ವತಃ ಆಂಜನೇಯನೇ ಚಾಲಕನಾಗಿ ಬಂದಿದ್ದ ಎಂಬ ನಂಬಿಕೆ ಭಕ್ತರಲ್ಲಿದೆ ಎಂದು ಸ್ಮರಿಸಿದರು.

68 ಸಮುದಾಯಗಳ ಪಾಲ್ಗೊಳ್ಳುವಿಕೆಯಿಂದ ಸಾಮರಸ್ಯದ ಸಂದೇಶ:
ಯಾಗ ಸಮಿತಿ ಅಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವೀರಾಂಜನೇಯ ಕ್ಷೇತ್ರದ ದಶಮಾನೋತ್ಸವ ಹಾಗೂ ಪಂಚಮುಖಿ ಆಂಜನೇಯ ಯಾಗದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕರ್ತರ ಪ್ರೇರಣೆ ಮತ್ತು ಶಕ್ತಿಯಿಂದ ನಿರ್ಮಾಣಗೊಂಡ ಈ ಮಂದಿರ ಹಿಂದೂ ಸಮಾಜದ ಭಕ್ತಿಯ ಕೇಂದ್ರವಾಗಬೇಕು. ಇಲ್ಲಿ ನಂಬಿಕೆಯಿ0ದ ಬರುವವರಿಗೆ ಚೈತನ್ಯ ದೊರೆಯಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಭಕ್ತರು ಸ್ವಯಂಪ್ರೇರಣೆಯಿAದ ಸೇವೆ ಸಲ್ಲಿಸುವ ಅಪೂರ್ವ ಕ್ಷೇತ್ರ ಇದಾಗಿದೆ. ಇಲ್ಲಿ ಬೇಡಿಕೊಂಡವರಿಗೆ ಅನುಗ್ರಹ ನೀಡುವ, ನಂಬಿದವರಿಗೆ ಇಂಬು ನೀಡುವ ಕ್ಷೇತ್ರ ಎಂಬ ನಂಬಿಕೆಯಿದೆ. ಪಂಚಮುಖಿ ಆಂಜನೇಯ ಯಾಗದ ಸಂಕಲ್ಪದಲ್ಲಿ ವಿವಿಧ ಸಮುದಾಯಗಳ ಬಂಧುಗಳು ಭಾಗವಹಿಸಿರುವುದು ವಿಶೇಷ. ಒಟ್ಟು ೬೮ ಸಮುದಾಯಗಳ ದಂಪತಿಗಳು ಯಾಗ ಸಂಕಲ್ಪದಲ್ಲಿ ಪಾಲ್ಗೊಂಡಿದ್ದು, ಇದು ಸಮಾಜಕ್ಕೆ ಒಗ್ಗಟ್ಟಿನ ಸಂದೇಶ ನೀಡಿದೆ. ಎಲ್ಲಿ ಪ್ರವಚನ ನಡೆಯುತ್ತದೆಯೋ ಅಲ್ಲಿ ಭಗವಂತನ ಸಾನ್ನಿಧ್ಯವಿರುತ್ತದೆ. ಯಾಗ ಸಂಪನ್ನಗೊAಡಾಗ ನಾವು ಹಾಕಿಕೊಂಡಿರುವ ಚಿಂತನೆಗಳು ಮತ್ತು ಸಂಕಲ್ಪಗಳು ಪೂರ್ಣಗೊಳ್ಳಲಿವೆ ಎಂಬ ವಿಶ್ವಾಸವಿದೆ ಎಂದು ಹೇಳಿದರು. ಯಾಗ ಸಮಿತಿ ಸಂಚಾಲಕ ಕೆ. ಜೀವಂಧರ್ ಜೈನ್, ಸ್ವಾಗತ ಸಮಿತಿ ಸಂಚಾಲಕ ನ್ಯಾಯವಾದಿ ಡಾ. ಅರುಣ್ ಶ್ಯಾಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳಿಕೃಷ್ಣ ಹಸಂತಡ್ಕ ಹಾಗೂ ಭುಜಂಗ ಕುಲಾಲ್ ಶ್ರೀಗಳಿಗೆ ಫಲಪುಷ್ಪ ನೀಡಿ ಗೌರವಿಸಿದರು. ಸಾಂಸ್ಕöತಿಕ ಸಮಿತಿ ಸಂಚಾಲಕ ಸಂತೋಷ್ ರೈ ಗಾಡಿಗುಡ್ಡೆ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ವಿದ್ಯಾಧರ್ ಜೈನ್ ಹಾಗೂ ಪ್ರಸನ್ನ ದರ್ಬೆ ಅತಿಥಿಗಳನ್ನು ಗೌರವಿಸಿದರು. ಪ್ರಧಾನ ಕಾರ್ಯದರ್ಶಿ ಪುನೀತ್ ಅತ್ತಾವರ ಸ್ವಾಗತಿಸಿ, ಸಹ ಸಂಚಾಲಕ ಶ್ರೀಧರ್ ತೆಂಕಿಲ ವಂದಿಸಿದರು. ರಾಮಚಂದ್ರ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಬೆಳಗ್ಗೆ ವೀರಾಂಜನೇಯನಿಗೆ ಕಲಶಾಭಿಷೇಕ ನಡೆಯುವ ಸಂದರ್ಭ ಕೋಟಿಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಶಿವರಾಮ್ ಆಳ್ವ, ದಿವಾಕರ ದಾಸ್ ನೆರ್ಲಾಜೆ ಸಹಿತ ಯಾಗ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

ರಾಮಾಯಣ ಪ್ರವಚನ, ಭಕ್ತಿ ಸಂಗೀತದ ಸವಿನೆನಪು
ಸಭಾ ಕಾರ್ಯಕ್ರಮದ ಬಳಿಕ ಡಾ. ಪಾವಗಡ ಪ್ರಕಾಶ್ ರಾವ್ ಅವರಿಂದ ರಾಮಾಯಣ ಪ್ರವಚನ ನಡೆಯಿತು. ಬಳಿಕ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ‘ಭಕ್ತಿ ಭಾವ ಸಂಗಮ – ಸಂಗೀತ ಗಾನ ಸಂಭ್ರಮ’ ಕಾರ್ಯಕ್ರಮ ನಡೆಯಿತು. ಭಕ್ತಿಗೀತೆಗಳ ಗಾಯನ ಭಕ್ತರನ್ನು ಭಕ್ತಿರಸದಲ್ಲಿ ಮಿಂದೇಳಿಸಿತು. ಧಾರ್ಮಿಕ ಶ್ರದ್ಧೆ, ಸಾಮೂಹಿಕ ಪ್ರಾರ್ಥನೆ, ಭಜನೆ ಹಾಗೂ ಸಮಾಜದ ಏಕತೆಯ ಸಂದೇಶದೊAದಿಗೆ ಮೂರನೇ ದಿನದ ಕಾರ್ಯಕ್ರಮ ಸಂಪನ್ನಗೊ0ಡಿತು.

ವ್ಯಕ್ತಿ ಆರಾಧನೆಗಿಂತ ಧರ್ಮ, ರಾಷ್ಟದ ಆರಾಧನೆ ಮುಖ್ಯ:
ಇಂದು ನಾವು ಕಠಿಣ ಪರಿಸ್ಥಿತಿಯ ಮಧ್ಯದಲ್ಲಿದ್ದೇವೆ ಎಂಬುದನ್ನು ಮರೆಯಬಾರದು. ನಮ್ಮ ಸಂಸ್ಕöತಿ, ಧರ್ಮ ಮತ್ತು ಅಸ್ಮಿತೆಯನ್ನು ಉಳಿಸುವ ಪ್ರಯತ್ನ ನಿರಂತರವಾಗಬೇಕು. ಆದರೆ ಈ ಕಾರ್ಯದಲ್ಲಿ ರಾಜಕೀಯ ಪ್ರವೇಶಿಸಬಾರದು. ವ್ಯಕ್ತಿ ಆರಾಧನೆಗೆ ಅವಕಾಶ ನೀಡದೆ ಸಮಾಜದ ಹಿತವೇ ಮುಖ್ಯವಾಗಬೇಕು. ಹನುಮಂತ ವ್ಯಕ್ತಿಯ ಪ್ರೀತಿಯ ಸಂಕೇತವಲ್ಲ, ರಾಮರಾಜ್ಯದ ಪ್ರತೀಕ. ರಾಮ ಧರ್ಮದ ಪ್ರತೀಕ. ರಾಮನ ಆರಾಧನೆ ವ್ಯಕ್ತಿ ಆರಾಧನೆಯಲ್ಲ, ಅದು ಧರ್ಮದ ಆರಾಧನೆ. ಸಂಘಟನೆಯ ಮೂಲಕ ರಾಷ್ಟçದ ಆರಾಧನೆ ನಡೆಯಬೇಕು. ವ್ಯಕ್ತಿಗಳು ಇಂದು ಇರುತ್ತಾರೆ, ನಾಳೆ ಇರಲಾರರು. ಆದರೆ ಧರ್ಮ ಮತ್ತು ರಾಷ್ಟçದ ಆದರ್ಶಗಳು ಶಾಶ್ವತವಾಗಿರುತ್ತವೆ. ಅಯೋಧ್ಯೆ ರಾಮಮಂದಿರದಲ್ಲಿ ಐದೂವರೆ ವರ್ಷ ಸೇವೆ ಸಲ್ಲಿಸಿದ ತಾನು ಇಂದು ಅಲ್ಲಿಲ್ಲ, ಹೊಸ ತಂಡ ಕಾರ್ಯನಿರ್ವಹಿಸುತ್ತಿದೆ. ಹಾಗೆಂದು ಹಿಂದಿನವರ ಮೇಲಿನ ಗೌರವ ಕಡಿಮೆಯಾಗಬೇಕಿಲ್ಲ. ಆದರೆ ವ್ಯಕ್ತಿಯ ಹಿಂದೆ ಸಾಗುವುದಕ್ಕಿಂತ ಧರ್ಮದ ಆದರ್ಶಗಳ ಹಿಂದೆ ಸಾಗುವುದು ನಮ್ಮ ಪರಂಪರೆಯಾಗಬೇಕು. ಸಮಾಜದ ಹಿತಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಡೆಯುವ ವ್ಯಕ್ತಿಯನ್ನು ಬೆಂಬಲಿಸುವ ಮನೋಭಾವ ನಮ್ಮಲ್ಲಿರಬೇಕು. ಆದರೆ ರಾಷ್ಟçಕಾರ್ಯಕ್ಕೆ ವಿರುದ್ಧವಾಗಿ ಯಾರಾದರೂ ನಡೆದುಕೊಂಡರೆ ಅವರೊಂದಿಗೆ ನಿಲ್ಲುವುದಿಲ್ಲ ಎಂಬ ಸ್ಪಷ್ಟ ಸಂದೇಶ ಸಮಾಜಕ್ಕೆ ಹೋಗಬೇಕು. ಈ ಭಾಗದಲ್ಲಿ ಕೆಲವು ವರ್ಷಗಳಿಂದ ವ್ಯಕ್ತಿ ಆರಾಧನೆ ನಮ್ಮ ಕಾರ್ಯಕರ್ತರಿಗೆ ಹುಚ್ಚು ಹಿಡಿದು ಬಿಟ್ಟಿದೆ. ನಾನು ಯಾವ ವ್ಯಕ್ತಿ ಎಂದು ಉಲ್ಲೇಖ ಮಾಡುವುದಿಲ್ಲ. ವ್ಯಕ್ತಿ ಆರಾಧನೆ ಸರಿಯಲ್ಲ. ಯಾರೊಬ್ಬರ ಹಿಂಬಾಲಕರಾಗುವುದಕ್ಕಿAತ ರಾಮನ ಆರಾಧಕರಾಗಿ, ರಾಷ್ಟçದ ಆರಾಧಕರಾಗಿ ರೂಪುಗೊಳ್ಳಬೇಕು. ಕಾರ್ಯಕರ್ತರಲ್ಲಿ ವ್ಯಕ್ತಿನಿಷ್ಠೆಗಿಂತ ಸಮಾಜನಿಷ್ಠೆ ಮತ್ತು ರಾಷ್ಟçನಿಷ್ಠೆ ಬೆಳೆಯಬೇಕು.- ಗೋಪಾಲ್ ಜೀ

Previous Post

ಬಾರ್ ಬಳಿ ಆಟೋ ಚಾಲಕನ ಮೇಲೆ ಹಲ್ಲೆ, ಜೀವ ಬೆದರಿಕೆ..!

OtherNews

(ನ.29) : ವಿವೇಕಾನಂದ ಕ್ರೀಡಾಂಗಣದಲ್ಲಿ ಕ್ರಿಕೆಟ್ ಹಬ್ಬ : ಬಿಲ್ಲವ ಯೂತ್ ಪುತ್ತೂರು ಆಶ್ರಯದಲ್ಲಿ ಕೋಟಿ ಚೆನ್ನಯ್ಯ ಟ್ರೋಫಿ..!!
ಕ್ರೀಡೆ

(ನ.29) : ವಿವೇಕಾನಂದ ಕ್ರೀಡಾಂಗಣದಲ್ಲಿ ಕ್ರಿಕೆಟ್ ಹಬ್ಬ : ಬಿಲ್ಲವ ಯೂತ್ ಪುತ್ತೂರು ಆಶ್ರಯದಲ್ಲಿ ಕೋಟಿ ಚೆನ್ನಯ್ಯ ಟ್ರೋಫಿ..!!

November 28, 2026
ಉಪ್ಪಿನಂಗಡಿ: ದುಬಾರಿ ಟೋಲ್ ವಿರುದ್ಧ ಸ್ಥಳೀಯರ ಪ್ರತಿಭಟನೆ : ಸ್ಥಳೀಯರಿಗೆ ಟೋಲ್ ವಿನಾಯಿತಿ ನೀಡಲು ಆಗ್ರಹ..!
Featured

ಉಪ್ಪಿನಂಗಡಿ: ದುಬಾರಿ ಟೋಲ್ ವಿರುದ್ಧ ಸ್ಥಳೀಯರ ಪ್ರತಿಭಟನೆ : ಸ್ಥಳೀಯರಿಗೆ ಟೋಲ್ ವಿನಾಯಿತಿ ನೀಡಲು ಆಗ್ರಹ..!

November 28, 2026
ವಿಟ್ಲ: ಚಿಕ್ಕಪ್ಪನನ್ನು ಇರಿದು ಹತ್ಯೆಗೈದ ಯುವತಿ ಬಂಧನ..!!
ಕ್ರೈಮ್

ವಿಟ್ಲ: ಚಿಕ್ಕಪ್ಪನನ್ನು ಇರಿದು ಹತ್ಯೆಗೈದ ಯುವತಿ ಬಂಧನ..!!

November 28, 2026
ಕಾರು–ಸ್ಕೂಟರ್ ಮುಖಾಮುಖಿ ಡಿಕ್ಕಿ; ಸವಾರ ಮೃತ್ಯು..!!
Featured

ಕಾರು–ಸ್ಕೂಟರ್ ಮುಖಾಮುಖಿ ಡಿಕ್ಕಿ; ಸವಾರ ಮೃತ್ಯು..!!

November 28, 2026
ಸುಳ್ಯ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ನೂತನ ಪ್ರವೀಣ್‌ ನೆಟ್ಟಾರ್ ಆಯ್ಕೆ..!
ಪುತ್ತೂರು

ಸುಳ್ಯ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ನೂತನ ಪ್ರವೀಣ್‌ ನೆಟ್ಟಾರ್ ಆಯ್ಕೆ..!

November 26, 2026
ಧರ್ಮಸ್ಥಳ ಲಕ್ಷ ದೀಪೋತ್ಸವ- 14 ನೇ ವರ್ಷದ ಪಾದಯಾತ್ರೆ ಸಮಾಲೋಚನಾ‌ ಸಭೆ : ಪಾದಯಾತ್ರೆ ಧರ್ಮ ಮತ್ತು ಸಾತ್ವಿಕ ಶಕ್ತಿ ಗಟ್ಟಿಗೊಳಿಸುವ ಕಾರ್ಯ; ಶರತ್‌ಕೃಷ್ಣ ಪಡುವೆಟ್ನಾಯ..!
ಧಾರ್ಮಿಕ

ಧರ್ಮಸ್ಥಳ ಲಕ್ಷ ದೀಪೋತ್ಸವ- 14 ನೇ ವರ್ಷದ ಪಾದಯಾತ್ರೆ ಸಮಾಲೋಚನಾ‌ ಸಭೆ : ಪಾದಯಾತ್ರೆ ಧರ್ಮ ಮತ್ತು ಸಾತ್ವಿಕ ಶಕ್ತಿ ಗಟ್ಟಿಗೊಳಿಸುವ ಕಾರ್ಯ; ಶರತ್‌ಕೃಷ್ಣ ಪಡುವೆಟ್ನಾಯ..!

November 25, 2026

Leave a Reply Cancel reply

Your email address will not be published. Required fields are marked *

Recent News

ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ 108 ತೀರ್ಥ ಕಲಶಾಭಿಷೇಕ, ಹನುಮಂತನ ಪಾದುಕೆ ಪ್ರತಿಷ್ಠೆ..!

ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ 108 ತೀರ್ಥ ಕಲಶಾಭಿಷೇಕ, ಹನುಮಂತನ ಪಾದುಕೆ ಪ್ರತಿಷ್ಠೆ..!

November 29, 2026
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಬಾರ್ ಬಳಿ ಆಟೋ ಚಾಲಕನ ಮೇಲೆ ಹಲ್ಲೆ, ಜೀವ ಬೆದರಿಕೆ..!

November 29, 2026
ವಳಾಲು ಟೋಲ್ ಪ್ರತಿಭಟನೆಗೆ ಅನುಮತಿ ಇಲ್ಲ; ಕಾನೂನು ಕ್ರಮದ ಎಚ್ಚರಿಕೆ..!!

ವಳಾಲು ಟೋಲ್ ಪ್ರತಿಭಟನೆಗೆ ಅನುಮತಿ ಇಲ್ಲ; ಕಾನೂನು ಕ್ರಮದ ಎಚ್ಚರಿಕೆ..!!

November 28, 2026
(ನ.29) : ವಿವೇಕಾನಂದ ಕ್ರೀಡಾಂಗಣದಲ್ಲಿ ಕ್ರಿಕೆಟ್ ಹಬ್ಬ : ಬಿಲ್ಲವ ಯೂತ್ ಪುತ್ತೂರು ಆಶ್ರಯದಲ್ಲಿ ಕೋಟಿ ಚೆನ್ನಯ್ಯ ಟ್ರೋಫಿ..!!

(ನ.29) : ವಿವೇಕಾನಂದ ಕ್ರೀಡಾಂಗಣದಲ್ಲಿ ಕ್ರಿಕೆಟ್ ಹಬ್ಬ : ಬಿಲ್ಲವ ಯೂತ್ ಪುತ್ತೂರು ಆಶ್ರಯದಲ್ಲಿ ಕೋಟಿ ಚೆನ್ನಯ್ಯ ಟ್ರೋಫಿ..!!

November 28, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.