ಪುತ್ತೂರು: ಕ್ರಿಕೆಟ್ ಅಭಿಮಾನಿಗಳಲ್ಲಿ ಕ್ರೀಡಾ ಸಂಭ್ರಮ ಹೆಚ್ಚಿಸಿರುವ ಕೋಟಿ ಚೆನ್ನಯ್ಯ ಟ್ರೋಫಿ–2026 ಕ್ರಿಕೆಟ್ ಪಂದ್ಯಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಿಲ್ಲವ ಯೂತ್ ಪುತ್ತೂರು ಆಶ್ರಯದಲ್ಲಿ ಬಿಲ್ಲವ ಸಮುದಾಯದ 10 ತಂಡಗಳ ಲೀಗ್ ಮಾದರಿಯ 11 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನವೆಂಬರ್ 29ರಂದು ಪುತ್ತೂರಿನ ನೆಹರುನಗರದ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆಯಲಿದೆ.
ಒಂದೇ ಟ್ರೋಫಿಗಾಗಿ ಹತ್ತು ತಂಡಗಳು ಸೆಣಸಾಡಲಿದ್ದು, ಕ್ರೀಡಾಭಿಮಾನಿಗಳಿಗೆ ಕ್ರಿಕೆಟ್ ರಸದೌತಣ ನೀಡಲು ಸಜ್ಜಾಗಿವೆ.
ಪಂದ್ಯಾಟದ ವಿಜೇತ ತಂಡಕ್ಕೆ ₹33,333 ನಗದು ಹಾಗೂ ಕೋಟಿ ಚೆನ್ನಯ್ಯ ಟ್ರೋಫಿ, ರನ್ನರ್ ಅಪ್ ತಂಡಕ್ಕೆ ₹22,222 ನಗದು ಬಹುಮಾನ ನೀಡಲಾಗುತ್ತದೆ. ತೃತೀಯ ಮತ್ತು ಚತುರ್ಥ ಸ್ಥಾನ ಪಡೆಯುವ ತಂಡಗಳಿಗೂ ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿದೆ.
ಕ್ರೀಡಾಕೂಟಕ್ಕೆ ಗಣ್ಯರು ಹಾಗೂ ಪ್ರಮುಖ ನಾಯಕರು ಆಗಮಿಸಲಿದ್ದು, ಪಂದ್ಯಾಟಕ್ಕೆ ವಿಶೇಷ ಮೆರುಗು ನೀಡಲಿದ್ದಾರೆ. ಪಂದ್ಯಾಟವನ್ನು ಯಶಸ್ವಿಗೊಳಿಸಲು ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಟಗಾರರನ್ನು ಪ್ರೋತ್ಸಾಹಿಸುವಂತೆ ಬಿಲ್ಲವ ಯೂತ್ ಪುತ್ತೂರು ಸಂಘಟಕರು ಮನವಿ ಮಾಡಿದ್ದಾರೆ.


























