ಮಂಗಳೂರು : ಹಿಂದೂ ಜಾಗರಣ ವೇದಿಕೆ ವಿಟ್ಲ , ಬಂಟ್ವಾಳ ಮತ್ತು ಪುತ್ತೂರು ಜಿಲ್ಲಾ ಪ್ರಮುಖರ ಮಾಹಿತಿ ಮೇರೆಗೆ ಅನ್ಯಕೋಮಿನ ಯುವಕರೊಂದಿಗೆ ಇದ್ದ ಹಿಂದೂ ಯುವತಿಯರನ್ನು ಮಂಗಳೂರಿನ ಬಂದರು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಜೂ.27 ರಂದು ನಡೆದಿದೆ.
ಕೆಲ ದಿನಗಳಿಂದ ಕೊಂಚಾಡಿ ವಸತಿ ನಿಲಯದಲ್ಲಿ ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರು ಇರುವ ಜೋಡಿಗಳು ತಂಗಿವೆ ಎಂಬ ಊಹಾಪೋಹಗಳು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿತ್ತು. ಆದರೆ ಇದರ ಬೆನ್ನು ಬಿದ್ದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸುಮಾರು ದಿನಗಳ ಪತ್ತೇದಾರಿ ಕಾರ್ಯಾಚರಣೆ ನಡೆಸಿದ್ದು, ಇಂದು ಮತ್ತೆ ಅದೇ ಮೊದಲಿನ ಎರಡು ಜೋಡಿ ಮತ್ತು ಮತ್ತೊಂದು ಜೋಡಿಗಳನ್ನು ಹೋಟೆಲ್ ಸಾಯಿ ಪ್ಯಾಲೇಸ್ ನಲ್ಲಿ ತಂಗಿರುವ ಮಾಹಿತಿ ಕಲೆಹಾಕಿದ್ದರು. ಈ ಜೋಡಿಗಳು ಹೋಟೆಲ್ ನಲ್ಲಿ ಮೋಜು ಮಸ್ತಿ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಸರಿಯಾದ ಮಾಹಿತಿಯೊಂದಿಗೆ ಬಂದರು ಪೋಲಿಸರಿಂದ ದಾಳಿ ನಡೆಸಿದ್ದು, ಅನ್ಯ ಕೋಮಿನ ಜೋಡಿಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ರೂಂ ನಂಬರ್ 208 ರಲ್ಲಿ ಯುವತಿಯರು ಹಾಗೂ ರೂಂ ನಂಬರ್ 407 ರಲ್ಲಿ ಯುವಕರು ವಾಸ್ತವ್ಯವಿದ್ದು, ಮೊದಲೇ ಪ್ರಿ ಪ್ಲ್ಯಾನ್ ಮಾಡಿದ್ದರು ಎನ್ನಲಾಗಿದೆ.
ಘಟನೆಯಲ್ಲಿ ವಶಕ್ಕೆ ಪಡೆದವರಲ್ಲಿ ಸುರತ್ಕಲ್ ಹಾಗೂ ಅತ್ತಾವರದ ಯುವತಿಯರು ಇದ್ದರು ಎಂಬ ಖಚಿತ ಮಾಹಿತಿ ಲಭಿಸಿದೆ.ಇಡೀ ದೇಶವೇ ಕೊರೊನಾ ಪರಿಸ್ಥಿತಿಯಿಂದ ಕಂಗೆಟ್ಟಿರುವ ಈ ಸಂದರ್ಭದಲ್ಲಿ ಯುವ ಜನಾಂಗ ಈ ರೀತಿ ದಾರಿ ತಪ್ಪುತ್ತಿರುವುದು ವಿಷಾದನೀಯವಾಗಿದೆ.
ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ರೂಮ್ ನೀಡಿದ ಹೋಟೆಲ್ ಸಾಯಿ ಪ್ಯಾಲೇಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಇಲಾಖೆಗೆ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಆಗ್ರಹಿಸಿದೆ.