ಬೆಳ್ತಂಗಡಿ: ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡು, ಆಕೆ ಏಳೂವರೆ ತಿಂಗಳ ಗರ್ಭವತಿಯಾದ ಬಳಿಕ ಆಕೆಗೆ ಮೋಸ ಮಾಡಿದ ಹಿನ್ನೆಲೆಯಲ್ಲಿ ಆರೋಪಿ ಲಾಯಿಲ ಗ್ರಾಮದ ಕಿರಣ್ ನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯು ಯುವತಿಯ ಮನೆಗೆ ಆಗಾಗ ಬರುತ್ತಿದ್ದು, ಸಲುಗೆ ಬೆಳೆದು ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿದ್ದನು.
ಆಕೆ ಆಕ್ಷೇಪಿಸಿದರೂ ಕೇಳದೇ, ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿಯಾಗಲು ಕಾರಣನಾಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.