ಪುತ್ತೂರು : ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರು ಆರೋಪಿಗಳಿಗೆ ಷರತ್ತು ಬದ್ಧ ಮಧ್ಯಂತರ ಜಾಮೀನು ಮಂಜೂರಾಗಿದೆ
ಆರೋಪಿಗಳಾದ ನೆಟ್ಟಣಿಗೆ ಮುತ್ತೂರು ಗ್ರಾಮದ ಕೊಟ್ಯಾಡಿ ಕಟ್ಟೆಪುಣಿ ನಿವಾಸಿ ಅಬ್ಬಾಸ್ ಅವರ ಪುತ್ರ ಮಮ್ಮದ್ ಶಾಫಿ ಯಾನೆ ಶಾಫಿ(34), ಸವಣೂರು ಗ್ರಾಮದ ಅತ್ತಿಕೆರೆ ನಿವಾಸಿ ಹಂಝ ಅವರ ಪುತ್ರ ಮಹಮ್ಮದ್ ಅಜರುದ್ದೀನ್ ಯಾನೆ ಅಜರ್(30ವ), ಸವಣೂರು ಗ್ರಾಮದ ಮಾಂತೂರು ಅಂಬೇಡ್ಕರ್ ಭವನದ ಬಳಿಯ ಇಸ್ಮಾಯಿಲ್ ಅವರ ಪುತ್ರ ನಝೀರ್ ಎಂ(38ವ) ಗೆ ಅಡಿಷನಲ್ ಹಿರಿಯ ಜಡ್ಜ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ನ್ಯಾಯಾಧಿಕಾರಿ ನ್ಯಾಯಾಲಯ ಮಧ್ಯಂತರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ನಝೀರ್ ಪರ ವಕೀಲರಾದ ನೂರುದ್ದೀನ್ ಸಾಲ್ಮರ ಮಹಮ್ಮದ್ ಶಾಫಿ ಪರ ದುರ್ಗ ಪ್ರಸಾದ್ ರೈ ಕುಂಬ್ರ ಅಜರ್ ಪರ ಸಿದ್ದೀಕ್ ಮಂಗಳೂರು ವಾದಿಸಿದರು.