ಕಡಬ : ಸುಬ್ರಹ್ಮಣ್ಯದಲ್ಲಿ ಕಾಡು ಪ್ರಾಣಿಯೊಂದರ ಮಾಂಸ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ನೆಟ್ಟಣ ವಾಲ್ತಾಜೆ ನಿವಾಸಿ ರಮೇಶ್ ಬಂಧಿತ ಆರೋಪಿಯಾಗಿದ್ದಾನೆ.
ಉನ್ನತ ಮೂಲಗಳ ಮಾಹಿತಿ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿ ಈತನನ್ನು ಬಂಧಿಸಲಾಯಿತು. ಈ ಕೃತ್ಯದಲ್ಲಿ ಇನ್ನೂ ಹಲವರ ಕೈವಾಡವಿದೆ ಎಂದು ತಿಳಿದುಬಂದಿದೆ. ಇತರ ಆರೋಪಿಗಳ ಬಗ್ಗೆ ತನಿಖೆಯೂ ಚುರುಕುಗೊಂಡಿದೆ. ಜಿಂಕೆ ಮಾಂಸ ಸಾಗಿಸುತ್ತಿದ್ದನು ಎಂಬುದಾಗಿ ಆರೋಪಿ ತಿಳಿಸಿರುವ ಬಗ್ಗೆ ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.