ಕಂದಾವರ : ಹುಟ್ಟಿನಿಂದ ಸಾವಿನ ತನಕವೂ ಮಣ್ಣಿನೊಂದಿಗೆ, ಬೆಂಕಿಯೊಂದಿಗೆ ಅನಿಶ್ಚಿತ ಬದುಕು ದೂಡುತ್ತಿದ್ದ, ಮಳಲಿ ಸೈಟಿನ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿಯಾದ ಮುತ್ತಣ್ಣ ನವರು ಜು.9 ರಂದು ನಿಧನರಾದರು.
ಬಡತನ, ಅನಕ್ಷರತೆ, ಮುಗ್ಧತನವನ್ನು ಒಡಲಲ್ಲಿರಿಸಿಕೊಂಡು ಕಂದಾವರ ಹಾಗೂ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಇಹಲೋಕ ತ್ಯಜಿಸಿದವರ ಅಂತ್ಯಸಂಸ್ಕಾರಕ್ಕೆ ಸಕಲ ವ್ಯವಸ್ಥೆ ಮಾಡಿ, ಮುಕ್ತಿ ಕೊಡುತ್ತಿದ್ದರು ಮುತ್ತಣ್ಣ.
ಸ್ಮಶಾನ ಸ್ವಚ್ಛತೆ, ಹೂಳಲು ಗುಂಡಿ ತೆಗೆಯುವುದು, ಪೂಜೆ ಮುಗಿದ ಬಳಿಕ ಶವವನ್ನು ಗುಂಡಿಗೆ ಇಳಿಸಿ ಮಣ್ಣು ಮುಚ್ಚುವುದು, ಸುಡುವುದಾದರೆ ಕಟ್ಟಿಗೆ ಹೊಂದಿಸಿ, ಚಿತೆಗೆ ಹೆಣ ಇಡುವುದು ಇವರ ಕಾಯಕ. ಎಲ್ಲಾ ಕೆಲಸಗಳು ಮುಗಿದ ಬಳಿಕ ಸತ್ತವರ ಕುಟುಂಬದವರು ಸೇರಿದಂತೆ, ಅಂತ್ಯಕ್ರಿಯೆಯಲ್ಲಿ ಭಾಗವಹಿಸುವವರು ಇವರ ಜೋಳಿಗೆಗೆ ಹಾಕುವ ಚಿಲ್ಲರೆ ಹಣವೇ ಬದುಕಿಗೆ ಆಧಾರ.
ಅನೇಕ ವರ್ಷಗಳಿಂದ ಕಂದಾವರ ಪಂಚಾಯತ್ ನಲ್ಲಿ ಕೂಡ ಸ್ವಚ್ಚತಕರ್ಮಿ ಯಾಗಿ ಕೆಲಸ ಮಾಡಿ ಕೊಂಡಿದ್ದರು.
ಬಜಪೆ , ಪೆರಾರ ಹಾಗೂ ವಿಶೇಷವಾಗಿ ಕಂದಾವರ ರುದ್ರ ಭೂಮಿಯಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮುತ್ತಣ್ಣ ಇಂದು ವಿಧಿವಶರಾದರು.