ಚಿಕ್ಕಮುಡ್ನೂರು ವಾರ್ಡ್ 7 ರ ಕೃಷ್ಣ ನಗರ ಪರಿಸರದಲ್ಲಿ ನಗರಸಭಾ ಸದಸ್ಯೆ ಲೀಲಾವತಿಯವರ ನೇತೃತ್ವದಲ್ಲಿ ನಗರಸಭೆಯ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯ ನಡೆಯಿತು.
ಸ್ವಚ್ಛ ಪುತ್ತೂರು ಕನಸಿನೊಂದಿಗೆ ಪರಿಸರ ಸ್ವಚ್ಛವಾಗಿಡಲು ಜನತೆಯ ಸಹಕಾರ ಅಗತ್ಯ ಇದೆ ಎಂದು ನಗರಸಭಾ ಸದಸ್ಯರು ಮನವಿ ಮಾಡಿದರು. ಸ್ವಚ್ಛತಾ ಕಾರ್ಯದಲ್ಲಿ ವೇಣುಗೋಪಾಲ್ ಕೃಷ್ಣ ನಗರ, ರವಿ ಆಚಾರ್ಯ ಕೃಷ್ಣ ನಗರ, ಮುನ್ನ ಕೃಷ್ಣನಗರ, ಶ್ರೀನಿವಾಸ , ಶ್ರೀಮತಿ ಲಲಿತ ನಾಯಕ್,ಸುಬ್ರಹ್ಮಣ್ಯ ನಾಯಕ್,ಸುದರ್ಶನ ಕೃಷ್ಣ ನಗರ. ಗಣೇಶ್ ಭಂಡಾರ್ಕರ್ ಪಾಲ್ಗೊಂಡರು.