ವಾಹನ ಒಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಶಿರಾಡಿ ಗ್ರಾಮದ ಲಾವತಡ್ಕ ಎಂಬಲ್ಲಿ ನಡೆದಿದೆ.
ಬೈಕ್ ಸವಾರರನ್ನು ಸಕಲೇಶಪುರದ ಆಲೂರು ತಾಲೂಕಿನ ಅರಿಯಳ್ಳಿ ಯ ಆಡ್ಯ ಗ್ರಾಮದ ಕೆಂಚಮ್ಮನ ಹೊಸಕೋಟೆ ನಿವಾಸಿ ಮೋಹನ್ ಮತ್ತು ಅರುಣ್ ಎಂದು ಗುರುತಿಸಲಾಗಿದೆ.ಇವರ ಪೈಕಿ ಅರುಣ್(33) ಸ್ಥಳದಲ್ಲೇ ಮೃತಾಪಟ್ಟಿದ್ದು ಈತ ಫರ್ನಿಚರ್ ಉದ್ಯೋಗ ನಡೆಸುತ್ತಿದ್ದು ಇನ್ನೊಬ್ಬ ಮೋಹನ್(37) ಎಂಬಾತ ಡ್ರೈವರ್ ಕೆಲಸ ನಡೆಸುತ್ತಿದ್ದು ತೀರಾ ಗಾಯಗೊಂಡ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಿಟ್ ಆಂಡ್ ರನ್ ನಡೆಸಿದ ಕೆ.ಎಸ್.ಆರ್.ಟಿ.ಸಿ ಬಸ್ ಅನ್ನು ಪೊಲೀಸರು ಗುಂಡ್ಯ ಸಮೀಪ ವಶಕ್ಕೆ ಪಡೆದಿದ್ದಾರೆ.