ಮೂಡಬಿದ್ರೆ: ತುಳುನಾಡಿನ ಉಸೇನ್‌ಬೋಲ್ಟ್ ಖ್ಯಾತಿಯ ಕಂಬಳದ ದಾಖಲೆಯ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರಿಗೆ ಶ್ರೀರಾಮ ಸೇನೆಯ ಪ್ರಶಾಂತ್ ಬಂಗೇರ ಎಂಬಾತ ಪೋನ್ ಕರೆಯ ಮೂಲಕ ಅವಾಚ್ಯ ಪದಗಳಿಂದ ನಿಂದಿಸಿ ಅವಮಾನಗೊಳಿಸಿರುವ ಘಟನೆಗೆ ಸಂಬಂಧಿಸಿದಂತೆ ಶ್ರೀರಾಮ ಸೇನೆಯ ಪ್ರಶಾಂತ್ ಬಂಗೇರ ಎಂಬಾತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಂಬಳ ಕೋಣದ ಯಜಮಾನರುಗಳು ಮತ್ತು ಶ್ರೀನಿವಾಸ ಗೌಡರ ಅಭಿಮಾನಿಗಳು ಮೂಡಬಿದ್ರೆ ಪೊಲೀಸ್ ಠಾಣೆಗೆ ಮನವಿ ನೀಡಿದ್ದಾರೆ.
ಶ್ರೀರಾಮ ಸೇನೆಯ ಪ್ರಶಾಂತ್ ಬಂಗೇರ ಎಂಬಾತ ಶ್ರೀನಿವಾಸ ಗೌಡ ಅವರಿಗೆ ನೀನು ‘ಬೆನ್ನಿಗೆ ಹಾಳೆ ಕಟ್ಟಿಕೊಂಡು ಬಾ ಅಲ್ಲಿ ನಿನ್ನನ್ನು ನೋಡಿಕೊಳ್ಳುತ್ತೇನೆ. ಒಂದು ಕೋಣ ಸಾಕುವ ಯೋಗ್ಯತೆ ಇಲ್ಲದವ ನೀನು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಾನು ಯಾರು ಗೊತ್ತಾ? ಗಂಜಿ ಗತಿ ಇಲ್ಲದವ ನೀನು. ಬೋ… ಮಗನೇ ಮೂಡಬಿದಿರೆಗೆ ಬಂದು ನಿನ್ನ ಕೈಕಾಲು ಮುರಿದು ಹಾಕುತ್ತೇನೆ ಎಂದು ಧಮ್ಕಿ ಹಾಕಿದ್ದಾನೆ.
ಕಂಬಳದ ಬಗ್ಗೆ ಗೊತ್ತಿಲ್ಲದ ಬ್ಯಾ…. ಎಂದು ಅತ್ಯಂತ ನೀಚ ಪದಗಳ ಮೂಲಕ ಬೈದಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೇ ಮನೆಯ ಹೆಣ್ಣು ಮಕ್ಕಳ ಬಗ್ಗೆಯೂ ಅತೀ ಕೀಳಾಗಿ ಮಾತನಾಡಿರುವ ಪ್ರಶಾಂತ್ ಬಂಗೇರ ತೀರಾ ಕೆಳದರ್ಜೆಯ ಪದ ಬಳಕೆ ಕೂಡ ಮಾಡಿದ್ದಾನೆ. ಸದ್ಯ ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.