ಪುತ್ತೂರು: ಮುಂಡೂರು ಗ್ರಾಮದ ಬದಿಯಡ್ಕ ಕುಪ್ಪೆ ಪಂಜುರ್ಲಿ ಗುಳಿಗ ದೈವ ಸೇವಾ ಸಮಿತಿ ಹಾಗೂ ಹನುಮಾನ್ ಯುವ ವೇದಿಕೆ ಪಜಿಮಣ್ಣು ಮುಂಡೂರು ಇದರ ಜಂಟಿ ಆಶ್ರಯದಲ್ಲಿ ದೈವಗಳ ಕಟ್ಟೆಯ ಸನ್ನಿಧಿಯಲ್ಲಿ ವನಮಹೋತ್ಸವ ಕಾರ್ಯಕ್ರಮವೂ ಜು.೧೬ ರಂದು ನಡೆಯಿತು. ಪುತ್ತೂರು ಅರಣ್ಯ ಅಧಿಕಾರಿ ಶ್ರೀಮತಿ ವಿದ್ಯಾರಾಣಿ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀಮತಿ ವಿದ್ಯಾ ರಾಣಿ ಅವರು ಮಾತಾನಾಡಿ, ಈ ಕಾರ್ಯಕ್ರಮ ಯಶಸ್ವಿಯಾಗಲು ಇವತ್ತು ನೆಟ್ಟ ಸಸಿಗಳ ಪಾಲನೆ ಪೋಷಣೆ ಅಗತ್ಯ ಎಂದರು. ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಲಕೃಷ್ಣ ಕಣ್ಣಾರಾಯ ರವರು ಸಂದರ್ಭೋಚಿತವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಸಮಿತಿ ಸದಸ್ಯರುಗಳ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ನೆನಪಿನ ಕಾಣಿಕೆ ನೀಡಲಾಯಿತು. ಕುಪ್ಪೆ ಪಂಜುರ್ಲಿ ಗುಳಿಗ ಸೇವಾ ಸಮಿತಿ ಅಧ್ಯಕ್ಷ ಧನಂಜಯ ಕುಲಾಲ್ ಸ್ವಾಗತಿಸಿ, ಮಾಜಿ ಸೈನಿಕ ರಂಗ ಶಾಸ್ತ್ರಿ ಮಣಿಲ ವಂದಿಸಿದರು.
ಕಾರ್ಯಕ್ರಮದಲ್ಲಿ ಸುಧೀರ್ ಶೆಟ್ಟಿ ನೇಸರ ಕಂಪ,ಉದಯಕುಮಾರ್ ಪಜಿಮಣ್ಣು,ಗ್ರಾಮ ಪಂಚಾಯತ್ ಸದಸ್ಯ ಉಮೇಶ ಗೌಡ ಅಂಬಟ ಹಾಗೂ ಹನುಮಾನ್ ಯುವ ವೇದಿಕೆಯ ಸದಸ್ಯರು, ಕುಪ್ಪೆ ಪಂಜುರ್ಲಿ ಗುಳಿಗ ದೈವ ಸಮಿತಿ ಸದಸ್ಯರು ಮತ್ತು ಕೊರಗಜ್ಜ ಜ್ಞಾನ ಮಂದಿರದ ಸದಸ್ಯರು ಉಪಸ್ಠಿತರಿದ್ದರು.