ಕಡೇಶಿವಾಲಯದ ಯುವಶಕ್ತಿ (ರಿ.) ಹಾಗೂ ಯುವಶಕ್ತಿ ಸೇವಾಪಥ ವತಿಯಿಂದ ಶ್ರೀ ಕ್ಷೇತ್ರ ಕೊಂಡಾಣ ಬಂಡಿ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ಅಶಕ್ತ ಕುಟುಂಬಗಳ ನೆರವಿಗಾಗಿ ರೂಪಿಸಿದ ಸಮಾಜಮುಖಿ ಸೇವಾನಿಧಿ ಯೋಜನೆ “ಕೊಂಡಾಣ ಸೇವಾಸಿಂಚನ” ಯಶಸ್ವಿಯಾಗಿ ನೆರವೇರಿತು.
ಈ ಯೋಜನೆಗೆ ಸಮಾಜದ ವಿವಿಧ ಭಾಗಗಳಿಂದ ಸಹೃದಯಿ ದಾನಿಗಳು ಉದಾರವಾಗಿ ಸ್ಪಂದಿಸಿದ್ದು, ಒಟ್ಟು ₹2,27,486/- (ಎರಡು ಲಕ್ಷ ಇಪ್ಪತ್ತೇಳು ಸಾವಿರದ ನಾಲ್ಕು ನೂರ ಎಂಬತ್ತಾರು ರೂಪಾಯಿ) ಸೇವಾನಿಧಿ ಸಂಗ್ರಹವಾಗಿದೆ.
ಸಂಗ್ರಹವಾದ ಈ ನಿಧಿಯನ್ನು ಅಶಕ್ತ ಹಾಗೂ ಸಂಕಷ್ಟದಲ್ಲಿರುವ ಕುಟುಂಬಗಳ ಸಹಾಯಕ್ಕಾಗಿ ಬಳಕೆ ಮಾಡಲಾಗುತ್ತದೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಮಹತ್ವದ ಸೇವಾ ಕಾರ್ಯಕ್ಕೆ ಆರ್ಥಿಕ ಹಾಗೂ ನೈತಿಕ ಬೆಂಬಲ ನೀಡಿದ ಎಲ್ಲಾ ದಾನಿಗಳು, ಸೇವಾಭಿಮಾನಿಗಳು ಹಾಗೂ ಸ್ವಯಂಸೇವಕರಿಗೆ ಯುವಶಕ್ತಿ ಸೇವಾಪಥ ಸಂಘಟನೆಯವರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಸಮಾಜಮುಖಿ ಕಾರ್ಯಗಳ ಮೂಲಕ ಅಗತ್ಯವಿರುವವರಿಗೆ ನೆರವಾಗುವ ಯುವಶಕ್ತಿ ಸೇವಾಪಥದ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.



























