ಬೆದ್ರಾಳ: ನಂದಿ ಫ್ರೆಂಡ್ಸ್ ಬೆದ್ರಾಳ ತಂಡದ ವತಿಯಿಂದ ಎರಡನೇ ವರ್ಷದ “ಕೆಸರ್ಡ್ ಒಂಜಿ ದಿನ ಕುಸಲ್ದ ಗೊಬ್ಬು” ಕಾರ್ಯಕ್ರಮವು ಜುಲೈ 12, 2026 (ಭಾನುವಾರ) ರಂದು ನಂದಿಕೇಶ್ವರ ಭಜನಾ ಮಂದಿರದ ಎದುರಿನ ಗದ್ದೆಯಲ್ಲಿ ನಡೆಯಲಿದೆ.
ಸಮಸ್ತ ಹಿಂದೂ ಬಾಂಧವರನ್ನು ಆತ್ಮೀಯವಾಗಿ ಸ್ವಾಗತಿಸಿರುವ ಆಯೋಜಕರು, ಹಲವು ದಶಕಗಳಿಂದ ಕೃಷಿ ನಡೆಯುತ್ತಿರುವ ಈ ಫಲವತ್ತಾದ ಗದ್ದೆಯ ಮಣ್ಣು ಉತ್ತಮ ಗುಣಮಟ್ಟ ಹಾಗೂ ಔಷಧೀಯ ಗುಣಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಕೆಸರು ಗದ್ದೆ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಶ್ರೀ ನಂದಿಕೇಶ್ವರ ದೇವರು ಹಾಗೂ ಕ್ಷೇತ್ರದ ದೈವಗಳು ಉತ್ತಮ ಆರೋಗ್ಯ ಮತ್ತು ಆಯುಷ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಗ್ರಾಮೀಣ ಸಂಸ್ಕೃತಿ, ಕೃಷಿ ಪರಂಪರೆ ಹಾಗೂ ಹಿರಿಯರ ಕಾಲದ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಮುಂದಿನ ಹಲವು ವರ್ಷಗಳ ಕಾಲವೂ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವ ಸಂಕಲ್ಪವನ್ನು ನಂದಿ ಫ್ರೆಂಡ್ಸ್ ಬೆದ್ರಾಳ ತಂಡ ವ್ಯಕ್ತಪಡಿಸಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸುವವರು ವಿಡಿಯೋ ಹಾಗೂ ರೀಲ್ಸ್‌ಗಳನ್ನು ತಯಾರಿಸಿ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿ Nandi Friends Bedrala ಪೇಜ್‌ಗೆ ಟ್ಯಾಗ್ ಮಾಡಬಹುದು. ಅತಿ ಹೆಚ್ಚು ನೈಜ ವೀಕ್ಷಣೆ (Original Views) ಪಡೆದ ರೀಲ್ಸ್‌ಗೆ “ರೀಲ್ಸ್ ದ ಬಿರ್ಸೆ” ಗೌರವದೊಂದಿಗೆ ₹1,111 ನಗದು ಬಹುಮಾನವನ್ನು ಜುಲೈ 19, 2026 ರಂದು ಪ್ರದಾನ ಮಾಡಲಾಗುತ್ತದೆ.
ವಿಶೇಷ ಸೂಚನೆ: Fake Views ಅಥವಾ ಕೃತಕ ವೀಕ್ಷಣೆಗಳಿಗೆ ಯಾವುದೇ ಅವಕಾಶ ಇರುವುದಿಲ್ಲ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ.
ಹೊರದೇಶಗಳಲ್ಲಿ ಹಾಗೂ ದೂರದಲ್ಲಿರುವ ಕೆಸರುಗದ್ದೆ ಅಭಿಮಾನಿಗಳಿಗೆ ಕಾರ್ಯಕ್ರಮ ವೀಕ್ಷಿಸಲೆಂದು ಕಳೆದ ವರ್ಷ ಕಾರ್ಯಕ್ರಮವು Zoom in TV ಯಲ್ಲಿ ನೇರಪ್ರಸಾರ ಹೊಂದಿದ್ದು. 16 ಸಾವಿರ ಕ್ಕಿಂತಲೂ ಹೆಚ್ಚು ವೀಕ್ಷಣೆ ಗೊಂಡ ಕಾರ್ಯಕ್ರಮವಾಗಿದೆ. ಹಾಗೂ ಈ ಸಲವು ನಮ್ಮ ಕಾರ್ಯಕ್ರಮವು Zoom In tv ಯಲ್ಲಿ ನೆರಪ್ರಸಾರ ಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

























