ಬೆಳ್ತಂಗಡಿ, ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೋಮಂತಡ್ಕದ ಅಗರಿ ಕ್ರಾಸ್ ಬಳಿ ಭಾನುವಾರ ನಡೆದ ಬೈಕ್ ಹಾಗೂ ಕಾರಿನ ನಡುವಿನ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಕಾಯರ್ತಡ್ಕ ನಿವಾಸಿ ಗಣೇಶ್ (36) ಮೃತಪಟ್ಟ ಬೈಕ್ ಸವಾರ. ಉಜಿರೆ ಕಡೆಯಿಂದ ಕಕ್ಕಿಂಜೆ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದ ಗಣೇಶ್ ಅವರು, ಚಾರ್ಮಾಡಿ ಕಡೆಯಿಂದ ಬರುತ್ತಿದ್ದ ಕಾರಿನ ಬಲಭಾಗದ ಸೈಡ್ ಮಿರರ್ ಗೆ ಡಿಕ್ಕಿ ಹೊಡೆದಿದ್ದರು.
ಗಂಭೀರ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟರು. ಅವಿವಾಹಿತರಾಗಿದ್ದ ಅವರು ತಂದೆ,ತಾಯಿ ಸಹೋದರ ಹಾಗೂ ಸಹೋದರಿಯನ್ನು ಆಗಲಿದ್ದಾರೆ.
ಘಟನೆಯ ಕುರಿತು ಬೆಳ್ತಂಗಡಿ
ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರು ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಇದರ ಬೆಳ್ತಂಗಡಿ ವಲಯದ ಸದಸ್ಯರಾಗಿದ್ದರು ಕಾಯರ್ತಡ್ಕ ಗಣೇಶ್ ಸ್ಟುಡಿಯೋ ನಡೆಸಿಕೊಂಡಿದ್ದರು ಇವರ ನಿಧನಕ್ಕೆ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದಿಂದ ಸಂತಾಪ ವ್ಯಕ್ತಪಡಿಸಿದ್ದಾರೆ.


























