ಪುತ್ತೂರು: ಕರ್ನಾಟಕ ಗೋ ಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣೆ ವಿದೇಯಕ 2020 ಯಥಾವತ್ತು ಜಾರಿ ಮಾಡಿ ಅಕ್ರಮ ಗೋಸಾಗಾಣಿಕೆ, ಗೋಹತ್ಯೆ ತಡೆಯಲು ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಡಬ ಪ್ರಖಂಡ ಹಾಗೂ ಉಪ್ಪಿನಂಗಡಿ ವತಿಯಿಂದ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಜು.16 ರಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ನೆರಿಯಾ,ಬಜರಂಗದಳ ಪುತ್ತೂರು ಜಿಲ್ಲಾ ಗೋರಕ್ಷಾ ಪ್ರಮುಖ್ ಮಹೇಶ್ ಬಜತ್ತೂರು,ಬಜರಂಗದಳ ಕಡಬ ಪ್ರಖಂಡ ಸಂಚಾಲಕ್ ಮೂಲಚಂದ್ರ,ಉಪ್ಪಿನಂಗಡಿ ಬಜರಂಗದಳ ಸಹ ಸಂಚಾಲಕ್ ರವಿನಂದನ್ ನೆಟ್ಟಿಬೈಲು,ಹಾಗೂ ಮಂಜುನಾಥ್ ಶೆಣೈ ಉಪಸ್ಥಿತರಿದ್ದರು.