ಕಳೆದ ಏಳು ವರ್ಷಗಳಿಂದ ಅಭಿವೃದ್ಧಿ ಪಥದಲ್ಲಿ ಸಾಗುತ್ತಾ, ವ್ಯಾವಹಾರಿಕವಾಗಿ ಗುರುತಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಸಂಸ್ಥೆಯೇ ಬಂಟಸಿರಿ ವಿವಿದ್ದೋದ್ದೇಶ ಸಹಕಾರಿ ಸಂಘ. ಸದಸ್ಯತನದ ಹೊಸತನವನ್ನು ಕಟ್ಟಿಕೊಡುತ್ತಾ, ಸಂಘವು ತನ್ನದೇ ಆದ ರೀತಿಯಲ್ಲಿ ಬಂಡವಾಳ ಹೂಡಿಕೊಂಡು ಒಂದಷ್ಟು ಜನರ ಪಾಲಿಗೆ ಉಳಿತಾಯದ ಸೂರಿನಂತೆ ಕಾರ್ಯನಿರ್ವಹಿಸುತ್ತಿದೆ. ಪಾಲು ಬಂಡವಾಳದಲ್ಲೂ ವಿಶೇಷತೆಯನ್ನು ತಂದುಕೊಡುತ್ತಿದ್ದು, ಪಾಲು ಬಂಡವಾಳದ ವೃದ್ಧಿಗಾಗಿ ಇಲ್ಲಿ ಶ್ರಮಿಸಲಾಗುತ್ತಿದೆ. ಈಗಾಗಲೇ ಸಂಘವು 2,74,75,869 ರೂ.ಅಷ್ಟು ಠೇವಣಿಯನ್ನು ಹೊಂದಿದ್ದು , 2021ರ ಮಾರ್ಚ್ ಅಂತ್ಯಕ್ಕೆ 3.5ಕೋಟಿಯಷ್ಟು ಠೇವಣಿ ಸಂಗ್ರಹಣಾ ಗುರಿಯನ್ನು ಹೊಂದಿದ್ದು, ತನ್ನ ಗುರಿಯನ್ನು ತಲುಪುವಲ್ಲಿಯೂ ಯಶಸ್ಸನ್ನು ಕಂಡುಕೊ0ಡಿದೆ.ಸಂಘವು 2019-20ರಲ್ಲಿ ರೂ. 6,35,054.90 ನಿವ್ವಳ ಲಾಭ ಗಳಿಸಿದ್ದು, 2019-20ರಲ್ಲಿ ರೂ. 4,56,88,644ದಷ್ಟು ವಾರ್ಷಿಕ ವಹಿವಾಟು ನಡೆಸಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ 1,19,90,973 ರಷ್ಟು ಹೆಚ್ಚಾಗಿದ್ದು, ವಾರ್ಷಿಕ ವಹಿವಾಟಿಂದ ಎಲ್ಲಾ ಖರ್ಚುಗಳನ್ನು ಕಳೆದು ರೂ. 6,35,055 ಲಾಭ ಗಳಿಸಿದೆ. ಈ ಸಂದರ್ಭದಲ್ಲಿ ಶೇ. 10 ಡಿವಿಡೆಂಟ್ ಘೋಷಿಸಲಾಯಿತು.
ಇಷ್ಟೆಲ್ಲಾ ರೂಪುರೇಷೆಗಳೊಡನೆ ಸದಸ್ಯರ ಉನ್ನತಿಗಾಗಿ ಸಹಕರಿಸುತ್ತಿರುವ ಸಂಸ್ಥೆಯ ವಾರ್ಷಿಕ ಮಹಾಸಭೆಯು ಡಿ.೧೫ರಂದು ನಡೆಯಿತು. ಸಂಘದ ಸಂಪೂಣ್ ವರದಿಯ ವಾಚಷನದ ಜೊತೆಗೆ ಆರಂಭಗೊ0ಡ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಯನ್.ಜಗನ್ನಾಥ್ ರೈ ಮಾದೋಡಿ, ಉಪಾಧ್ಯಕ್ಷರಾದ ಎ.ಲಕ್ಷಿö್ಮÃನಾರಾಯಣ ಶೆಟ್ಟಿ ಅರಿಯಡ್ಕ, ನಿರ್ದೇಶಕರಾದ ಎಂ.ದಯಾನAದ ರೈ ಮನವಳಿಕೆ, ಜೈರಾಜ್ ಭಂಡಾರಿ ನೋಣಾಲು, ಕೆ.ವ¸ಂತಕುಮಾರ ರೈ ದುಗ್ಗಳ, ಹೆಚ್.ಪ್ರವೀಣ್ ಭಂಡಾರಿ ಭಾವಬೀಡು, ಪುರಂದರ ರೈ ಮಿತ್ರಂಪಾಡಿ, ಜಯರಾಮ ರೈ ನುಳಿಯಾಲು, ರಾಧಾಕೃಷ್ಣ ರೈ ಬೂಡಿಯಾರು, ಸಂಜೀವ ಆಳ್ವ ಪಿ ಹಾರಾಡಿ, ಬಾಲಕೃಷ್ಣ ಶೆಟ್ಟಿ ಕೊಂಡೆವೂರು, ಶ್ರೀಮತಿ ವಿದ್ಯಾಪ್ರಸಾದ್ ಆಳ್ವ, ಕಾರ್ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲು ಮತ್ತಿತರರು ಉಪಸ್ಥಿತರಿದ್ದರು.