ದಿ ಬೆಸ್ಟ್ ಪಿಎಂ ಎಂದೇ ಖ್ಯಾತಿ ಪಡೆದಿರುವ ನರೇಂದ್ರ ಮೋದಿಯವರು ತಮ್ಮ ಟ್ವಿಟರ್ ಖಾತೆಯಲ್ಲಿ 70 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ.
ಗುಜರಾತ್ ನ ಮುಖ್ಯಮಂತ್ರಿಯಾಗಿದ್ದ ಅವಧಿ(2009)ಯಲ್ಲಿ ಟ್ವಿಟರ್ ಖಾತೆ ಪ್ರಾರಂಭಿಸಿದ ಪ್ರಧಾನಿ ಮೋದಿ ಒಂದೇ ವರ್ಷದಲ್ಲಿ ಒಂದು ಲಕ್ಷ ಫಾಲೋವರ್ಸ್ ಗಳನ್ನು ಹೊಂದುವಲ್ಲಿ ಯಶಸ್ವಿಯಾಗಿದ್ದರು. ಕಳೆದ ಜುಲೈ 2020ರಲ್ಲಿ 60 ಮಿಲಿಯನ್ ರಷ್ಟಿದ್ದ ಫಾಲೋವರ್ಸ್ ಸಂಖ್ಯೆ ಈಗ 70 ಲಕ್ಷದ ಗಡಿದಾಟಿರುವುದು ಹೆಮ್ಮೆಯ ಸಂಗತಿಯಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಗೆ 26.3 ಮಿಲಿಯನ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ 19.4 ಮಿಲಿಯನ್ ಫಾಲೋವರ್ಸ್ ಗಳಿದ್ದಾರೆ. ವಿಶ್ವದ ದೊಡ್ಡಣ್ಣ ಅಮೆರಿಕದ ಬಲಿಷ್ಠ ನಾಯಕರಾದ ಜೋ ಬಿಡೆನ್ ಗೆ 30.9 ಮಿಲಿಯನ್ ಫಾಲೋವರ್ಸ್, 2007ರಲ್ಲಿ ಟ್ವಿಟರ್ ಗೆ ಪ್ರವೇಶಿಸಿದ ಬರಾಕ್ ಒಬಾಮ 129.8 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಟ್ವಿಟರ್ ಖಾತೆ ನಿಷೇಧಿಸಿಕೊಳ್ಳುವ ಮುನ್ನ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಗೆ 88.7 ಮಿಲಿಯನ್ ಫಾಲೋವರ್ಸ್ ಇದ್ದರು.