ಆಧುನಿಕತೆಯ ಸೋಗಿಗೆ ಆರೋಗ್ಯದ ಹಿತದೃಷ್ಟಿಯಿಂದ ತಂತ್ರಜ್ಞಾನದ ಜತೆ ಜಾಗರುಕತೆಯಿಂದ ಸಂಭಾಳಿಸುವ ಪರಿಕರಗಳು ಅವಶ್ಯವಾಗುತ್ತವೆ. ಇದೀಗ ಇದೇ ನಿಲುವನ್ನಿಟಟುಕೊಂಡು ಪುತ್ತೂರಿನ ದರ್ಬೆಯಲ್ಲಿ ನುತನವಾಗಿ ಸಂಪೂರ್ಣ ಸುಸಜ್ಜಿತ ವ್ಯವಸ್ಥೆಗಳೊಡನೆ ಶುಭಾರಂಭಗೊAಡಿದೆ ಶೈಲೇಶ್ ಮತ್ತು ಇಂದಿರಾ ಶೈಲೇಶ್ ಮಾಲಕತ್ವದ ಸಾಯಿ ಮೆಡಿ ಎಯಿಡ್ಸ್..
ಸಾಯಿ ಡಿಸ್ಟಿçಬ್ಯೂಟರ್ಸ್ ನಾಮಾಂಕಿತದೊಡನೆ ಆರಂಭವಾದ ಸಂಸ್ಥೆಯು ಇದೀಗ ಜನರ ಆರೋಗ್ಯವನ್ನು ಹಿತದೃಷ್ಟಿಯಲ್ಲಿಟ್ಟುಕೊಂಡು , ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡು ಮುಂದುವರೆಯುತ್ತಿದೆ. ಯಾವುದೇ ಪ್ರಕಾರದ ರೋಗಿಗಳಾದರೂ ಅವರಿಗೆಂದು ವಿರಮಿಸಲು ಆರೋಗ್ಯಯುತ ಮಾದರಿಯ ಪರಿಕರಗಳು ಅಗತ್ಯವಾಗಿರುತ್ತದೆ. ವೀಲ್ ಚೇರ್, ವಾಕಿಂಗ್ ಸ್ಟಿಕ್, ಬೆಲ್ಟ್÷್ಸ ,ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಹೀಗೆ ಇನ್ನೂ ಅನೇಕಾನೇಕ ಸಾಮಗ್ರಿಗಳು ಇಲ್ಲಿ ಮಿತದರದಲ್ಲಿ ಲಭ್ಯವಿದ್ದು, ಇದರ ಜತೆಗೆ ವಾರ ಅಥವಾ ತಿಂಗಳ ಅವಧಿಗೆ ಬಾಡಿಗೆ ರೂಪದಲ್ಲಿಯೂ ನೀಡುವ ವ್ಯವಸ್ಥೆಗಳು ಇಲ್ಲಿವೆ.
ನೂತನ ಸಂಸ್ಥೆಯ ಶುಭಾರಂಭ ಕಾರ್ಯಕ್ರಮವು ದೀಪ ಪ್ರಜ್ವಲನೆ ಮುಖೇನ ನಡೆಯಿತು. ಪ್ರಶಾಂತ್ ಮಹಲ್‌ನ ಮಾಲಕರಾದ ಸೀತಾರಾಮ ರೈ ಸವಣೂರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಮನೋಹರ್ ಕಲ್ಲಾರೆ ಮತ್ತಿತರರು ಉಪಸ್ಥಿತರಿದ್ದರು.