ಕೋಡಿಂಬಾಡಿ: ಗ್ರಾಮ ಪಂಚಾಯತಿ ವ್ಯಾಪ್ತಿಯ ದಾರಂದಕುಕ್ಕು ಅಂಗನವಾಡಿಯಲ್ಲಿ ಸದಸ್ಯರಾದ ಜಯಪ್ರಕಾಶ್ ಬದಿನಾರು ಅವರ ಅಧ್ಯಕ್ಷತೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಸಭೆ ನಡೆಯಿತು. ಕೋಡಿಂಬಾಡಿ ಆರೋಗ್ಯಾಧಿಕಾರಿ ಶೀಲಾ ಸಿ.ಎಂ, ಮತ್ತು ತಾಲೂಕು ಆಶಾಕಾರ್ಯಕರ್ತರ ಮೇಲ್ವಿಚಾರಕಿ ಸುಜಾತಾ ಸಂತೋಷ್ ರವರು ಸ್ತನ್ಯಪಾನ , ಸಾಂಕ್ರಾಮಿಕಾ ರೊಗ ಹರಡುವಿಕೆ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ವೇದಾವತಿ ಶೆಟ್ಟಿ,ಆಶಾ ಕಾರ್ಯಕರ್ತೆಯರಾದ ಸುಪ್ರಿಯಾ, ಸ್ತ್ರೀಶಕ್ತಿಯ ಸದಸ್ಯರು , ಬಾಣಂತಿಯರು ಮತ್ತು ಮಕ್ಕಳು ಪೋಷಕರು ಉಪಸ್ಥಿತರಿದ್ದರು. ಅಂಗನವಾಡಿ ಸಹಾಯಕಿಯಾದ ವೀಣಾ ಸಹಕರಿಸಿದರು.

























