ವಾಟ್ಸಪ್ ಒಂದು ಫೋಟೋ, ವಿಡಿಯೋ ಗಳ ಭಂಡಾರವೇ ಆಗಿದೆ. ಆದರೆ ಕೆಲವೊಮ್ಮ ಈ ಫೋಟೋಗಳನ್ನು ದುರುಪಯೋಗ ಪಡಿಸಿಕೊಳ್ಳೋರು ಇದ್ದಾರೆ. ಹಾಗಾಗಿ ಬಳಕೆದಾರರ ಸೇಫ್ಟಿ ಗಾಗಿ ವಿಭಿನ್ನ ಫೀಚರ್ ಒಂದನ್ನು ತಂದಿದೆ. ಈ ಹೊಸ ಅಪ್ಡೇಟ್ ನಲ್ಲಿ ಬಳಕೆಗಾರರು ತಮ್ಮ ಫ್ರೆಂಡ್ಸ್ ಅಥವಾ ಫ್ಯಾಮಿಲಿ ಗ್ರೂಪ್ ಗಳಿಗೆ ಶೇರ್ ಮಾಡುವ ಫೋಟೋಗಳು ಕೇವಲ ಒಂದು ಬಾರಿ ಮಾತ್ರ ನೋಡಲು ಸಾಧ್ಯವಾಗುವಂತೆ ಮಾಡಲಾಗಿದೆ.
ಈ ಹೊಸ ಫೀಚರ್ ಬಳಸೋದು ಹೇಗೆ ಗೊತ್ತಾ..?
- ಮೊದಲಿಗೆ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ನಲ್ಲಿ ನಿಮ್ಮ ವಾಟ್ಸ್ ಆಪ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ.
- ಬಳಿಕ ನಿಮ್ಮ ಸ್ನೇಹಿತರ ಚಾಟ್ ಓಪನ್ ಮಾಡಿ, ಅಲ್ಲಿ ಕೆಳಗೆ ಕಾಣುವ ಪಿನ್ ಐಕಾನ್ ಕ್ಲಿಕ್ ಮಾಡಿರಿ.
- ನಂತರ ಅಲ್ಲಿ ಗ್ಯಾಲರಿ ಕ್ಲಿಕ್ ಮಾಡಿ ನಿಮಗೆ ಬೇಕಾದ ವೀಡಿಯೋ ಅಥವಾ ಫೋಟೋ ಆಯ್ಕೆ ಮಾಡಿಕೊಳ್ಳಿ.
- ಈಗ ನಿಮಗೆ ಫೋಟೊ ಪ್ರಿವ್ಯೂ ಕಾಣಲಿದೆ. ಅಲ್ಲೆ ಕೆಳಬಾಗದಲ್ಲಿ 1 ಎಂಬ ಸಂಖ್ಯೆ ಕಾಣಲಿದೆ. ಅದರ ಮೇಲೆ ಕ್ಲಿಕ್ ಮಾಡಿ ಸೆಂಡ್ ಒತ್ತಿ.

ಆಗ ನೀವು ಕಳುಹಿಸುವ ಚಿತ್ರ ಒಂದು ಡಾಕ್ಯುಮೆಂಟ್ ರೀತಿ ಸೆಂಡ್ ಆಗುತ್ತದೆ. ಬಳಿಕ ಈ ಫೋಟೋವನ್ನು ನಿಮ್ಮ ಫ್ರೆಂಡ್ ಅಥವಾ ಕುಟುಂಬದವರು ಕೇವಲ ಒಮ್ಮೆ ಓಪನ್ ಮಾಡಿ ನೋಡಬಹುದು.. ಬಳಿಕ ಅದು opened ಎಂದು ಬರಲಿದೆ. ಮತ್ತೆ ಅವರ ಈ ಫೋಟೋವನ್ನು ನೋಡಲು ಸಾಧ್ಯವಿರೋದಿಲ್ಲ.