ಸುಳ್ಯ: ಡಿ.೨೭ರಂದು ನಡೆಯುವ ಗ್ರಾಮ ಪಂಚಾಯತ್ ಚುನಾವಣೆಗೆ ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಗಳು ಸ್ಪರ್ಧಿಸಿದ್ದು ಅವರ ಮೇಲೆ ಶಿಸ್ರು ಕ್ರಮಕ್ಕೆ ಜಿಲ್ಲಾ ಬಿಜೆಪಿಗೆ ವರದಿ ಮಾಡಲಾಗುವುದೆಂದು ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದರು.ಅವರು ಸುಳ್ಯದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದರು.
ಕೆಲವು ಬಂಡುಕೋರ ಬಿಜೆಪಿ ಅಭ್ಯರ್ಥಿಗಳು ನಾವು ಸ್ವಾಬಿಮಾನಿ ಬಿಜೆಪಿ ಎಂದು ಹೇಳಿಕೊಂಡು ಪ್ರಚಾರ ಅರಂಭಿಸಿದ್ದಾರೆ.ದೇಶದಲ್ಲಿ ಇರುವುದು ನಡ್ಡಾ ಅವರ ಅಧ್ಯಕ್ಷತೆಯಲ್ಲಿ ಇರುವ ಬಿಜೆಪಿ.ಕರ್ನಾಟಕದಲ್ಲಿ ನಳೀನ್ ಕುಮಾರ್ ಅಧ್ಯಕ್ಷತೆಯ ಬಿಜೆಪಿ,ಜಿಲ್ಲೆಯಲ್ಲಿ ಇರುವುದು ಸುದರ್ಶನ್ ಅಧ್ಯಕ್ಷತೆಯ ಬಿಜೆಪಿ,ಸುಳ್ಯದಲ್ಲಿ ಇರುವುದು ಹರೀಶ್ ಕಂಜಿಪಿಲಿ ಅಧ್ಯಕ್ಷತೆಯ ಬಿಜೆಪಿ .ಸುಳ್ಯ ವಿಧಾನ ಸಭಾ ಕ್ಷೇತ್ರದ ೪೬ ಗ್ರಾಮ ಪಂಚಾಯತ್ ಳ ಲ್ಲಿ ೪೬ ರಲ್ಲಿ ಬಿಜೆಪಿ ಬೆಂಬತರು ಗೆಲ್ಲುವ ವಿಶ್ವಾಶ ಇದೆ.೪೨ ಗ್ರಾಮ ಪಂಚಾಯತ್ ಗಳಲಲ್ಲಿ ಗೆಲುವು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಂಗಾರ.ಬಿಜೆಪಿ ಮುಖಂಡರಾದ ಎ.ವಿ ತೀರ್ಥರಾಮ,ಸುಬೋದ್ ಶೆಟ್ಟಿ ರಾಕೇಶ್ ಕೆಡೆಂಜಿ,ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾ ರ್ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಇತರರು ಉಪಸ್ತಿತರಿದ್ದರು