ಪುತ್ತೂರು : ಚಿಕ್ಕಮುಡ್ನೂರು ಹಾಲು ಉತ್ಪಾದಕರ ಸಹಕಾರಿ ಸಂಘದ 2019-20ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯು ದ. 19ರಂದು ಸಂಘದ ಆವರಣದಲ್ಲಿ ಸುಂದರ ಪೂಜಾರಿ ಬಡಾವು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
![](https://zoomintv.online/wp-content/uploads/2020/12/WhatsApp-Image-2020-12-19-at-4.32.48-PM-1024x768.jpeg)
ಪ್ರಸಕ್ತ ಸಾಲಿನಲ್ಲಿ ರೂ.7,70,896 ಲಾಭ ಗಳಿಸಿದ್ದು ಪ್ರತೀ ಲೀಟರ್ ಹಾಲಿಗೆ 1.27ಪೈಸೆ ಬೋನಸ್ ಹಾಗೂ 20% ಡಿವಿಡೆಂಟ್ ನೀಡಲಾಗುವುದೆಂದು ತೀರ್ಮಾನಿಸಲಾಗಿದ್ದು, 287935 ಲೀ ಹಾಲು ಖರೀದಿ ಮಾಡಲಾಗಿದ್ದು 25 ಹೊಸ ಸದಸ್ಯರು ಸೇರಿದಂತೆ 335 ಮಂದಿ ಸದಸ್ಯರನ್ನೊಳಗೊಂಡಿದ್ದು, ರೂ 68150 ಪಾಲು ಬಂಡವಾಳವನ್ನು ಹೊಂದಿದ್ದು ಸಂಘ ‘ಎ’ ಶ್ರೇಣಿ ಪಡೆದುಕೊಂಡಿದ್ದು ಸಂಘಕ್ಕೆ ಕಟ್ಟಡ ನಿರ್ಮಾಣದ ಸಲುವಾಗಿ ಜಾಗ ಖರೀದಿ ಚಿಂತನೆ ನಡೆಯುತ್ತಿದೆ ಎಂದು ಅಧ್ಯಕ್ಷರು ಹೇಳಿದರು. ಈ ಸಂದರ್ಭದಲ್ಲಿ ಸಂಘದಲ್ಲಿ ತಮ್ಮ ಸ್ವಂತ ಶ್ರಮದಿಂದಲಿ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ಮೋನಪ್ಪ ಗೌಡ, ನಾರಾಯಣ ರೈ ಹಾಗೂ ಸುದರ್ಶನ್ ಇವರುಗಳನ್ನು ಸಂಘದ ಪರವಾಗಿ ಅಧ್ಯಕ್ಷ ಸುಂದರ ಪೂಜಾರಿ, ಉಪಾಧ್ಯಕ್ಷ ಸುರೇಶ್ ಬಿ. ಯು ಹಾಗೂ ಎಲ್ಲಾ ಸಿಬ್ಬಂದಿಗಳು ಸೇರಿ ಸನ್ಮಾನಿಸಿದರು.
![](https://zoomintv.online/wp-content/uploads/2020/12/WhatsApp-Image-2020-12-19-at-4.32.49-PM-1024x768.jpeg)
ದ. ಕ. ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಸದಸ್ಯರ ತೊಂದರೆಗಳನ್ನು ಆಲಿಸಿ ಸೂಕ್ತ ಸಲಹೆಗಳನ್ನು ನೀಡಿದರು. ಸೊಸೈಟಿ ಕಾರ್ಯದರ್ಶಿ ಅನುರಾಧ ವರದಿ ವಾಚಿಸಿ, ಉಪಾಧ್ಯಕ್ಷ ಸುರೇಶ್ ಬಿ ಸ್ವಾಗತಿಸಿ ಸದಸ್ಯರಾದ ಚಿದಾನಂದ ಬಿ ಆರ್ ವಂದಿಸಿದರು.
![](https://zoomintv.online/wp-content/uploads/2020/12/WhatsApp-Image-2020-12-19-at-4.32.50-PM-1024x768.jpeg)