ಪುತ್ತೂರು: ಬನ್ನೂರು ಪ್ರಜ್ಞಾ ವಿಶೇಷ ಮಕ್ಕಳ ಕೇಂದ್ರವೂ ಬಿರುಮಲೆಗೆ ಸ್ಥಳಾಂತರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತ್ರಿಶೂಲ್ ಫ್ರೆಂಡ್ಸ್(ರಿ.) ಪುತ್ತೂರು ಇದರ ಕಾರ್ಯಕರ್ತರು ಬಿರುಮಲೆಯಲ್ಲಿ ಆ.8 ರಂದು ಸ್ವಚ್ಛತಾ ಕಾರ್ಯವನ್ನು ನೆರವೇರಿಸಿದರು.
ಸದಾ ಒಂದಲ್ಲಾ ಒಂದು ಸಮಾಜಮುಖಿ ಕಾರ್ಯಗಳನ್ನು ನೆರವೇರಿಸುತ್ತಿರುವ ‘ತ್ರಿಶೂಲ್ ಫ್ರೆಂಡ್ಸ್’ ತಂಡವೂ ತಮ್ಮ ಉತ್ತಮ ಕಾರ್ಯಗಳ ಮೂಲಕ ಜನ ಮನ್ನಣೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ತ್ರಿಶೂಲ್ ಫ್ರೆಂಡ್ಸ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು ಭರತ್ ಕುಂಟ್ಯಾನ ಸಹಕರಿಸಿದರು.