ನವದೆಹಲಿ: ವ್ಯಾಕ್ಸಿನ್ ಸರ್ಟಿಫಿಕೇಟ್ ಪಡೆಯಲು ಈ ಹಿಂದೆ ಕೆಲವು ನಿಮಿಷಗಳ ಸಮಯ ಹಿಡಿಯುತ್ತಿತ್ತು. ಇದೀಗ ಈ ಪ್ರಕ್ರಿಯೆಯನ್ನ ಕೇಂದ್ರ ಸರ್ಕಾರ ಮತ್ತಷ್ಟು ಸರಳೀಕರಿಸಿದ್ದು ಸೆಕೆಂಡುಗಳಲ್ಲೇ ವ್ಯಾಕ್ಸಿನ್ ಸರ್ಟಿಫಿಕೇಟ್ ಕೈ ಸೇರುವಂತೆ ಮಾಡಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಷುಕ್ ಮಾಂಡವಿಯಾ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಸೆಕೆಂಡುಗಳಲ್ಲೇ ನೀವು ಮಾಡಬೇಕಿರೋದು ಇಷ್ಟೇ..
- ಮೊದಲಿಗೆ +91 9013151515 ಈ ನಂಬರ್ನ್ನು ಮೊಬೈಲ್ಗೆ ಸೇವ್ ಮಾಡಿಕೊಳ್ಳಬೇಕು.
- ನಂತರ ವಾಟ್ಸ್ ಆ್ಯಪ್ ಮೂಲಕ ಈ ನಂಬರ್ಗೆ Covid Certificate ಎಂದು ಟೈಪ್ ಮಾಡಿ ಮೆಸೇಜ್ ಕಳುಹಿಸಬೇಕು
- ಇದಾದ ನಂತರ ನಿಮ್ಮ ನಂಬರ್ಗೆ ಬರುವ ಓಟಿಪಿಯನ್ನ ಎಂಟರ್ ಮಾಡಬೇಕು.
- ಈ ಸರಳ ಮೂರು ವಿಧಾನಗಳನ್ನ ಅನುಸರಿಸಿದರೆ ಕ್ಷಣ ಮಾತ್ರದಲ್ಲಿ ನಿಮ್ಮ ನಂಬರ್ಗೆ ನೀವು ವ್ಯಾಕ್ಸಿನ್ ತೆಗೆದುಕೊಂಡ ಸರ್ಟಿಫಿಕೇಟ್ ನಿಮ್ಮ ಕೈ ಸೇರಲಿದೆ.
Revolutionising common man's life using technology!
— Office of Dr Mansukh Mandaviya (@OfficeOf_MM) August 8, 2021
Now get #COVID19 vaccination certificate through MyGov Corona Helpdesk in 3 easy steps.
📱 Save contact number: +91 9013151515
🔤 Type & send 'covid certificate' on WhatsApp
🔢 Enter OTP
Get your certificate in seconds.