ಪುತ್ತೂರು : ಚಿಕ್ಕಮುಡ್ನೂರು ‘ಎ’ ಆಯುಷ್ಮಾನ್ ಆರೋಗ್ಯ ಮಂದಿರವನ್ನು ತಾಲೂಕು ಆರೋಗ್ಯ ಅಧಿಕಾರಿಗಳಾದ ದೀಪಕ್ ರೈ ದೀಪ ಬೆಳಗಿಸಿ ಉದ್ಘಾಟಿಸಿದರು.

ಆರೋಗ್ಯ ಮಂದಿರದಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುಶ್ಮಿತಾ ಪ್ರಭು ಹಾಗೂ ಇತರ ಸಿಬ್ಬಂದಿಗಳು, ರೋಟರಿಪುರ ಅಂಗನವಾಡಿ ಕಾರ್ಯಕರ್ತೆ, ತಾಲೂಕು ಆರೋಗ್ಯ ಕಚೇರಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ತ್ರಿವೇಣಿ ಸ್ವಾಗತಿಸಿ, ಚಂದ್ರಕಲಾ ಧನ್ಯವಾದಗೈದರು.ಅಶಾ ಕಾರ್ಯಕರ್ತೆ ರಾಧಿಕಾ ಹಾಗೂ ಸುನಂದ ಸಹಕರಿಸಿದರು.