ಸವಣೂರು: ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಡಿಕ್ಕಿ ಹೊಡೆದ ಘಟನೆ ಸವಣೂರಿನ ಚಾಪಳ್ಳ ಎಂಬಲ್ಲಿ ನಡೆದಿದ್ದು ಘಟನೆ ಪರಿಣಾಮ ದ್ವಿಚಕ್ರ ವಾಹನ ಸವಾರರಿಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರನ್ನು ಮಿತ್ತೂರು ಕಲ್ಲಸರ್ಪೇ ನಿವಾಸಿ ಯಜ್ಞೇಶ್ (21) ಮತ್ತು ಮೂಲತ ಪಾಣಾಜೆ ಭರಣ್ಯ ನಿವಾಸಿ ಪ್ರಸ್ತುತ ಕಲ್ಲಡ್ಕ ಕೊಳೆಕ್ಕೀರು ನಿವಾಸಿ ಜಗನ್ (21) ಎಂದು ಗುರುತಿಸಲಾಗಿದೆ.
ಮೃತ ಯಜ್ಞೇಶ್ ಡೆಲಿವರಿ ಬಾಯ್ ಕೆಲಸ ನಿರ್ವಹಿಸುತ್ತಿದ್ದರು ಮತ್ತು ಜಗನ್ ಅಕ್ಷಯ ಕಾಲೇಜ್ ವಿದ್ಯಾರ್ಥಿಯಾಗಿದ್ದು ಈಗಷ್ಟೇ ಇಂಟರ್ನ್ಶಿಪ್ ವಿದೇಶದಲ್ಲಿ ಮುಗಿಸಿ ಬಂದಿದ್ದರು ಎಂದು ತಿಳಿದು ಬಂದಿದೆ.
ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು. ಮೃತದೇಹಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.



























